ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಮೂವರು ಸಾವು

ಶ್ರೀರಂಗಪಟ್ಟಣ.ಫೆ.14. ಪಟ್ಟಣದ ರೈಲು ನಿಲ್ದಾಣ ಸಮೀಪ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕರು ನದಿ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಮುಜಾಸಿಮ್ (17), ತೌಸೀಫ್ (17) ಮತ್ತು ಇಫ್ತಿಕಾರ್ (18) ಮೃತರು.ಮುಜಾಸೀಮ್‌ ಶವ ಪತ್ತೆಯಾಗಿದೆ. ಉಳಿದವರ ಶವಗಳಿಗೆ ಹುಡುಕಾಟ ನಡೆದಿದೆ. ಎಲ್ಲರೂ ಹಾಸನ ಜಿಲ್ಲೆಯ ಅರಸೀಕೆರೆ ಮೂಲದವರು ಎಂದು ತಿಳಿದು ಬಂದಿದೆ.

ಮೈಸೂರಿನ ಮದರಸದಲ್ಲಿ ಅರೇಬಿಕ್ ವ್ಯಾಸಂಗ ಮಾಡುತ್ತಿದ್ದರು. ಮೀನು ಹಿಡಿಯಲು ನದಿಗೆ ಇಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Comment