ಕಾಲೇಜು ಶಿಕ್ಷಣ ಜೀವನಕ್ಕೆ ಬುನಾದಿ

ಮೈಸೂರು ಏ. 21- ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಂಸ್ಕೃತಿ, ಸಾಹಿತ್ಯ ಚಟುವಟಿಕೆಗಳು ಕ್ಷೀಣಿಸುತ್ತಿವೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವುದು ಅವಶ್ಯಕವಾಗಿದೆ ಎಂದು ಮೈಸೂರು ವಿ.ವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್ ಶ್ರೀಕಂಠ ಸ್ವಾಮಿ ಅಭಿಪ್ರಾಯ ಪಟ್ಟರು.
ಇಂದು ಬೆಳಿಗ್ಗೆ ಜಗನ್ಮೋಹನ ಅರಮನೆಯಲ್ಲಿ ಶ್ರೀ ವಾಣಿ ವಿಲಾಸ ಅರಸು ಮಹಿಳಾ ಪದವಿ ಕಾಲೇಜು ವತಿಯಿಂದ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮೊಬೈಲ್, ಇಂಟರ್‍ನೆಟ್ ಸೇರಿದಂತೆ ಹಲವು ಅಂತರ್ಜಾಲ ಚಟುವಟಿಕೆಗಳು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಸಾಹಿತ್ಯ, ಹಾಗೂ ಪಠ್ಯೇತ್ತರ ಚಟುವಟಿಕೆಗಳ ಬಗ್ಗೆ ನಿರಾಸಕ್ತಿ ಉಂಟಾಗುತ್ತಿದೆ. ಇದು ಭವಿಷ್ಯಕ್ಕೆ ಮಾರಕವಾಗಿ ಪರಿಣಾಮ ಬೀರಲಿದೆ ಎಂದರು.
ಕಾಲೇಜಿನ ವರ್ಷದ ಅವಲೋಕನವೇ ವಾರ್ಷಿಕ ಸಮಾರಂಭ ಎಂದರೆ ತಪ್ಪಾಗಲಾರದು. ಕಾಲೇಜಿನ ಜೀವನ ಮಹತ್ತರವಾದ ಘಟ್ಟವಾಗಿದು ್ದ, ಇದು ಜೀವನಕ್ಕೆ ಬುನಾದಿಯಾಗಿದೆ. ಪಠ್ಯ ವಿಷಯಗಳ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗುತ್ತದೆ. ತಮ್ಮಲ್ಲಿರುವ ಪ್ರತಿಭೆ ಅನಾವರಣವಾಗುವುದರ ಜೊತೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಲು ಪೂರಕವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ರಾಜ ಮಹಾರಾಜರು ತಮ್ಮ ದೂರದೃಷ್ಠಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದರು. ವಿದ್ಯಾರ್ಥಿ ದಿಸೆಯಲ್ಲಿ ವಿನಾಕಾರಣ ಕಾಲಹರಣ ಮಾಡದೆ ಅಧ್ಯಯನದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಹೇಳಿದ ಅವರು ಕಲಿಕೆಯ ಜೊತೆ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಭಾರತಿ ಶ್ರೀಧರರಾಜ ಅರಸ್, ಮಹೇಶ್ ಅರಸ್, ಶ್ರೀಕಂಠರಾಜ ಅರಸ್ ಮತ್ತಿತ್ತರರು ಪಾಲ್ಗೊಂಡಿದ್ದರು.

Leave a Comment