ಕಾಲೇಜುಗಳು, ವಿವಿಗಳಲ್ಲಿ ಮೊಬೈಲ್ ನಿಷೇಧಿಸಿದ ಯೋಗಿ ಸರಕಾರ

ಲಕ್ನೋ, ಅ.18: ರಾಜ್ಯದ ಎಲ್ಲಾ ಕಾಲೇಜುಗಳು ಮತ್ತು ವಿವಿಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಯಸರಕಾರ ಆದೇಶ ಹೊರಡಿಸಿದೆ.

ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳು ಕಾಲೇಜುಗಳು ಮತ್ತು ವಿವಿಗಳ ಒಳಗೆ ಮೊಬೈಲ್ ಕೊಂಡೊಯ್ಯುವುದು ಮತ್ತು ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ರಾಜ್ಯಾದ್ಯಾಂತ ಈ ನಿಷೇಧವು ಶಿಕ್ಷಕರಿಗೂ ಅನ್ವಯಿಸಲಿದೆ.

Leave a Comment