ಕಾಲು ಕಳೆದುಕೊಂಡರೂ ಫುಟ್‌ಬಾಲ್ ಬಿಡಲಿಲ್ಲ

ಕೇರಳಿಗನ ಯಶೋಗಾಥೆ

ಆತ ಅಪಘಾತದಲ್ಲಿ ತನ್ನ ಕಾಲನ್ನೇ ಕಳೆದುಕೊಂಡನು. ಆದರೆ ಫುಟ್‌ಬಾಲ್ ಆಡುವುದನ್ನು ಮಾತ್ರ ನಿಲ್ಲಿಸಿಲ್ಲ. ಅದಕ್ಕೆ ಅಲ್ವೆ ಹೇಳುವುದು ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಮಾಡಿ ತೋರಿಸಬಹುದು ಎಂಬುದಕ್ಕೆ ೨೪ ವರ್ಷದ ಎಸ್.ಆರ್. ವೈಶಾಖ್ ಸಾಧನೆಯೇ ತಾಜಾ ಉದಾಹರಣೆ.

ಹದಿಹರೆಯದ ಕೆಲ ಯುವಕರು ಆಟವಾಡಬೇಕೆಂದರೆ ಅವರಿಗೆ ಆಸಕ್ತಿ ಇರುವುದಿಲ್ಲ. ಇದಕ್ಕಾಗಿ ನಾನಾ ಕಾರಣಗಳನ್ನು ಹುಡುಕುವುದು ಸಹಜ. ಆದರೆ ಕೇರಳದ ಕಲ್ಲಿಕೋಟೆ ಜಿಲ್ಲೆಯ ವೈಶಾಖ್ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಫುಟ್‌ಬಾಲ್ ಆಡುವುದನ್ನು ನಿಲ್ಲಿಸಲಿಲ್ಲ.

ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಎದೆಗುಂದದೆ ಎರಡು ತಿಂಗಳ ಕಾಲ ದೈಹಿಕ ಚಿಕಿತ್ಸೆಗೆ ಒಳಗಾಗಿ ತನ್ನ ಮೂಲ ಫಾರಂಗೆ ಮರಳಿದನು. ಸೈಕಲ್ ತುಳಿಯುವುದು, ಈಜುವುದು, ಅಷ್ಟೇ ಏಕೆ ಒಂದೇ ಕಾಲಿನಲ್ಲಿ ಕಾರನ್ನು ಚಲಾಯಿಸುವಷ್ಟು ಸಮರ್ಥನಾದನು. ಇದರ ಜೊತೆಗೆ ವೇಗವಾಗಿ ನಡೆಯುವುದನ್ನು ಅಭ್ಯಾಸ ಮಾಡಿದನು.

ಕೇರಳ ವಾಲಿಬಾಲ್ ತಂಡದಲ್ಲಿ ಆಡುತ್ತಿರುವ ವೈಶಾಖ್. ತಾನೊಬ್ಬ ವೃತ್ತಿಪರ ಫುಟ್‌ಬಾಲ್ ಆಟಗಾರನೆಂಬುದನ್ನು ಸಾಬೀತುಪಡಿಸಿದ್ದಾನೆ. ಇತ್ತೀಚೆಗೆ ನಡೆದ ಫುಟ್‌ಬಾಲ್ ಪಂದ್ಯದಲ್ಲಿ ಸುಮಾರು ೨೦,೦೦೦ ಪ್ರೇಕ್ಷಕರ ಸಮ್ಮುಖದಲ್ಲಿ ಗೋಲು ಬಾರಿಸಿರುವ ವಿಡಿಯೋ ತುಣಕನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದಾನೆ.

ಈತನ ಕೌಶಲ್ಯ ಮತ್ತು ಧೈರ್ಯವನ್ನು ಮೆಚ್ಚಿ ಈಶಾನ್ಯ ಯುನೈಟೆಡ್ ಫುಟ್‌ಬಾಲ್ ತಂಡದ ತರಬೇತುದಾರ ವೈಶಾಖನಿಗೆ ತಾಲೀಮಿನಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ಇದಲ್ಲದೆ ಯುವ ಕೇರಳ ಕ್ಲಬ್ ಪರ ಅತಿಥಿ ಆಟಗಾರನಾಗಿ ಆಡುವ ಅವಕಾಶ ಪ್ರಾಪ್ತವಾಯಿತು.

ವೈಶಾಖ ೧೩ ವರ್ಷದ ಹುಡುಗನಾಗಿದ್ದ ವೇಳೆ ಕಲ್ಲಿಕೋಟೆಯಲ್ಲಿ ನಡೆಯಲಿರುವ ಕಿರಿಯರ ಫುಟ್‌ಬಾಲ್ ಟೂರ್ನ್‌ಮೆಂಟ್‌ಗಾಗಿ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವೇಳೆ ಅಪಘಾತ  ಸಂಭವಿಸಿತು.

ತನ್ನ ಚಿಕ್ಕಪ್ಪನ ಮಗ ಬೈಕ್ ಚಲಿಸುತ್ತಿದ್ದರು. ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದು ಬಸ್ಸಿಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ನಾನು ನನ್ನ ಎಡಗಾಲನ್ನು ಕಳೆದುಕೊಂಡೆ. ಈ ನೋವು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ವೈಶಾಖ್ ಅತ್ಯಂತ ದುಃಖದಿಂದ ಹೇಳುತ್ತಾರೆ.

ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಎದೆಗುಂದದೆ ಎರಡು ತಿಂಗಳ ಕಾಲ ದೈಹಿಕ ಚಿಕಿತ್ಸೆಗೆ ಒಳಗಾಗಿ ತನ್ನ ಮೂಲ ಫಾರಂಗೆ ಮರಳಿದನು. ಸೈಕಲ್ ತುಳಿಯುವುದು, ಈಜುವುದು, ಅಷ್ಟೇ ಏಕೆ ಒಂದೇ ಕಾಲಿನಲ್ಲಿ ಕಾರನ್ನು ಚಲಾಯಿಸುವಷ್ಟು ಸಮರ್ಥನಾದನು. ಇದರ ಜೊತೆಗೆ ವೇಗವಾಗಿ ನಡೆಯುವುದನ್ನು ಅಭ್ಯಾಸ ಮಾಡಿದನು. ಅದೇ ವೇಗದಲ್ಲಿ ಫುಟ್‌ಬಾಲ್ ಕಿಕ್ ಮಾಡುವುದನ್ನು ಅಭ್ಯಾಸ ಮಾಡಿದ ಬಳಿಕ ಕ್ರಮೇಣ ಫುಟ್‌ಬಾಲ್ ಆಡುವಲ್ಲಿ ವೈಶಾಖ್ ಯಶಸ್ವಿಯಾದನು.

ಕೇರಳದ ದೇವಗಿರಿ ಕಾಲೇಜಿನ ಹಾಸ್ಟೆಲ್ ಸ್ನೇಹಿತರ ಜೊತೆ ಫುಟ್‌ಬಾಲ್ ಆಡುತ್ತಿದ್ದೆ. ನಿನ್ನಂತಹ ಫುಟ್‌ಬಾಲ್ ಆಟಗಾರರು ಇದ್ದಾರೆಯೇ ಎಂದು ತರಬೇತುದಾರರು ಕೇಳಿದರು. ಪಂದ್ಯವನ್ನು ಆಯೋಜಿಸುವ ಸಲುವಾಗಿ ಈ ಪ್ರಶ್ನೆ ಕೇಳಿದರು. ಆದರೆ ಅದೃಷ್ಟ ನನಗೆ ಒಲಿದು ಬರಲಿಲ್ಲ. ಆಂಪ್ಯೂಟ್ ಫುಟ್‌ಬಾಲ್ ಆಟಗಾರರು ಯಾರೂ ಇರಲಿಲ್ಲ. ಕೇರಳದಲ್ಲಿ ಅಂಪ್ಯೂಟ್ ವಾಲಿಬಾಲ್ ತಂಡವಿರುವುದು ನನ್ನ ಗಮನಕ್ಕೆ ಬಂದಿತು ಎಂದು ವೈಶಾಖ್ ಹೇಳಿದರು.

ಆಗ ತಕ್ಷಣವೇ ಕೇರಳ ಅಂಪ್ಯೂಟ್ ವಾಲಿಬಾಲ್ ತಂಡಕ್ಕೆ ಸೇರಿಕೊಳ್ಳಲು ನಿರ್ಧರಿಸಿದರು. ಆ ನಂತರ ಭಾರತದ ಪರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಾಲಿಬಾಲ್ ಅಂಪ್ಯೂಟ್ ತಂಡವನ್ನು ಪ್ರತಿನಿಧಿಸಿದರು. ವೈಶಾಖ್ ತಾನೊಬ್ಬ ಯಶಸ್ವಿ ವಾಲಿಬಾಲ್ ಆಟಗಾರನಾಗಿ ಹೊರಹೊಮ್ಮಿದ ನಂತರ ಫುಟ್‌ಬಾಲ್ ಆಡಲು ಮುಂದಾದನು. ಏಷ್ಯನ್ ಕಪ್‌ಗಾಗಿ ಆಂಪ್ಯೂಟ್ ಫುಟ್‌ಬಾಲ್ ಪಂದ್ಯಾವಳಿಯ ತಂಡಕ್ಕೆ ಆಯ್ಕೆಯಾದರು.

ಆ ಪಂದ್ಯದಲ್ಲಿ ವೈಶಾಖ್ ಗೋಲನ್ನು ಬಾರಿಸುವಲ್ಲಿ ಯಶಸ್ವಿಯಾದರು. ಆ ಒಂದು ಕ್ಷಣ ಆತನ ಕನಸನ್ನು ನನಸು ಮಾಡಿತು. ಮಾಡಬೇಕೆಂಬ ಹಂಬಲ, ಇಚ್ಛಾಶಕ್ತಿ ಹೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಯುವಕನ ಸಾಧನೆ ಇತರರಿಗೆ ಮಾದರಿಯಾಗಬೇಕು.

Leave a Comment