ಕಾಲಕ್ಕೆ ತಕ್ಕಂತೆ ನಡೆಯುವ ಮಾತಿನಲ್ಲಿ ವಿಶ್ವಾಸ ಇದೆ- ಮಾಧುರಿ

ಮುಂಬಯಿ, ಏ 15  ಕಾಲಕ್ಕೆ ತಕ್ಕಂತೆ ನಡೆಯುವ ಮಾತಿನಲ್ಲಿ ಬಾಲಿವುಡ್ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ವಿಶ್ವಾಸ ಇಟ್ಟಿದ್ದಾರಂತೆ.

ಸಮಯಕ್ಕನುಸಾರ ಬದಲಾಗಬೇಕು. ಹೀಗಾಗಿ ನಾನು ಸಮಯದೊಂದಿಗೆ ಚಲಿಸುತ್ತೇನೆ. ವಯಸ್ಸಿನ ಆಧಾರದ ಮೇಲೆ ಇನ್ನೊಬ್ಬರ ವ್ಯಕ್ತಿತ್ವ ಅಳೆಯುವುದರಲ್ಲಿ ವಿಶ್ವಾಸ ಇಟ್ಟಿಲ್ಲವಂತೆ. ಬದಲಾಗಿ ಅನಿರಿಕ್ಷೀತವಾಗಿ ದೊರಕುವ ಪಾತ್ರಗಳ ಮೇಲೆ ಅವರಿಗೆ ನಂಬಿಕೆ ಇದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುರಿ, ”ನಾನು ಹೆಂಡತಿ, ಎರಡು ಮಕ್ಕಳ ತಾಯಿಯಾಗಿದ್ದೇನೆ. ಹೀಗಾಗಿ ಕೆಲವೊಂದು ಪಾತ್ರಗಳನ್ನು ನಿರ್ವಹಿಸಲು ಅಸಮರ್ಥಳು ಎಂಬ ಮಾತನ್ನು ನಾನು ಅಲ್ಲಗಳೆಯುತ್ತೇನೆ. ಬದಲಾಗಿ ವಿಭಿನ್ನವಾಗಿ ಏನಾದರೊಂದು ಮಾಡುವುದರಲ್ಲಿ ವಿಶ್ವಾಸ ಇಟ್ಟಿದ್ದೇನೆ. ಹೀಗಾಗಿಯೇ, ‘ಡೇಡ್ ಇಶ್ಕಿಯಾ’, ‘ಗುಲಾಬ್ ಗ್ಯಾಂಗ್’, ‘ಬಕೇಟ್ ಲಿಸ್ಟ್’ ಹಾಗೂ ‘ಟೋಟಲ್ ಧಮಾಲ್’ ದಂತಹ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು. ತೆರೆಯ ಮೇಲೆ ವಿಭಿನ್ನವಾಗಿ ನಾನು ಏನಾದರೊಂದು ಮಾಡಲಿದ್ದೇನೆ ಎಂಬುದು ಪ್ರೇಕ್ಷಕರ ಮನದಲ್ಲಿ ಮೂಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Leave a Comment