ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದನೆ ಹತ್ತಿ ಮಿಲ್ ಮಾಲೀಕರಿಂದ ಆಹಾರ ಧಾನ್ಯ ವಿತರಣೆ

ಬಳ್ಳಾರಿ ಏ 05 : ಕೊರೋನಾ ಸೋಂಕು ಹಿನ್ನಲೆಯಲ್ಲಿ ತಮ್ಮ ಹತ್ತಿ ಮಿಲ್ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಿದ್ದರೂ. ಕಾರ್ಮಿಕರ ಸಂಕಷ್ಟ ಅರಿತ ನಂದಿ ಸಾಯಿ ಕಾಟನ್ ಮಿಲ್ ಮಾಲೀಕರೂ ಆಗಿರುವ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಕಾಐ ಕಾರಿ ಸಮಿತಿ ಸದಸ್ಯ ವಿ.ವೆಂಕಟೇಶ್ ಅವರು ಇಂದು ಮಿಲ್‍ನ 50 ಕ್ಕೂ ಹೆಚ್ಚು ಕಾರ್ಮಿಕರಿಗೆ ಆಹಾರದ ಧಾನ್ಯದ ಕಿಟ್ ವಿತರಿಸಿದರು.

ಕಿಟ್‍ನಲ್ಲಿ 25 ಕಿ ಲೋ ಅಕ್ಕಿ , ನಾಲ್ಕು ಕಿಲೊ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, 2 ಕಿಲೋ ಉಪ್ಪಿಟ್ಟು ರವೆ, ಕಾರದ ಪುಡಿ, ಒಂದೊಂದು ಕಿಲೋ ಸಕ್ಕರೆ, ಬೆಲ್ಲ ಮೊದಲಾದವನ್ನು ಇರಿಸಲಾಗಿದೆ.

ಕಾರ್ಮಿಕರು ಸಂತಸದಿಂದ ಇದ್ದರೆ ಮಾತ್ರ ಮಾಲೀಕ ಸಂಸತದಿಂದ ಇರಲು ಸಾಧ್ಯ ಅದಕ್ಕಾಗಿ ಅವರಿಗೆ ಲಾಕ್‍ಡೌನ್ ದಿನಗಳಲ್ಲಿ ಮನೆಯಲ್ಲೇ ಇದ್ದು ಜೀವನ ನಡೆಸಬೇಕೆಂಬ ಬಯಕೆಯಿಂದ ಧಾನ್ಯದ ಕಿಟ್ ವಿತರಿಸಿದ್ದಾಗಿ ವೆಂಕಟೇಶ್ ಹೇಳಿದರು.
ಈ ಸಂದರ್ಭದಲ್ಲಿ ವಿ ವೆಂಕಟೇಶ್, ವಿ ತಿಮ್ಮಪ್ಪ, ಎರ್ರಿಸ್ವಾಮಿ, ಸುನೀಲ್ ರವಿ, ಧನುಜಂಯ್, ಸಂಗಪ್ಪ, ಕಾರ್ತಿಕ್ ಅನಿಲ್, ವಿ.ರಮಣ ಮೊದಲಾದವರು ಇದ್ದರು.

Leave a Comment