ಕಾರ್ಮಿಕರ ವೇತನ ಹೆಚ್ಚಳಕ್ಕೆ ಒತ್ತಾಯ

ರಾಯಚೂರು.ಸೆ.11- ಕಾರ್ಮಿಕರ ವೇತನ ಹಾಗೂ ಭತ್ಯೆಗಳ ಹೆಚ್ಚಳಕ್ಕೆ ಒತ್ತಾಯಿಸಿ, ರಾಯಚೂರು ಥರ್ಮಲ್ ಪವರ್ ಸ್ಟೇಷನ್ ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಇಂದು ಶಕ್ತಿ ನಗರದ ಆರ್‌ಟಿಪಿಎಸ್‌ ಮುಖ್ಯದ್ವಾರದಲ್ಲಿ ಅನಿರ್ಧಿಷ್ಟ ಪ್ರತಿಪ್ರಭಟನೆ ಧರಣಿ ನಡೆಸಿದರು.
ಕಳೆದ ಒಂದು ವರ್ಷದಿಂದ ವೇತನ ಹೆಚ್ಚಳ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಗಮನ ನೀ‌ಡುತ್ತಿಲ್ಲ. ಕೆಪಿಸಿಎಲ್ ವೇತನ ಹೆಚ್ಚಳ ಮಾಡಿದರೆ ಮಾತ್ರ ಹೆಚ್ಚಿಸಬೇಕಾಗುತ್ತದೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಕೆಪಿಸಿಎಲ್ ಅಧಿಕಾರಿಗಳು ಮಾತ್ರ ನೀವು ನಮಗೆ ಸಂಬಂಧವಿಲ್ಲ. ಗುತ್ತಿಗೆದಾರರನ್ನು ಕೇಳಿ ಎನ್ನುತ್ತಿದ್ದಾರೆ.
ವೇತನ ಹಾಗೂ ಭತ್ಯೆ ಹೆಚ್ಚಳಕ್ಕಾಗಿ ಬೇಡಿಕೆ ಪತ್ರ ಸಲ್ಲಿಸಿ ಒಂದು ವರ್ಷ ಗತಿಸಿದರೂ ಕಾರ್ಮಿಕರಿಗೆ ಸರಿಯಾಗಿ ಸ್ಪಂದನೆ ದೊರೆತಿಲ್ಲ. 25 ವರ್ಷ ಸೇವೆ ಸಲ್ಲಿಸಿದ ಗುತ್ತಿಗೆ ಕಾರ್ಮಿಕನಿಗೆ 20 ಸಾವಿರ ರೂ. ಸಂಬಳವಿಲ್ಲ ಎಂದರು. 100 ಕ್ಕೆ 70 ರಷ್ಟು ಕಾರ್ಮಿಕರ ವೇತನ 10 ಸಾವಿರ ದಾಟಿಲ್ಲ. ಶೇ.20 ರಷ್ಟು ಕಾರ್ಮಿಕರಿಗೆ ಕನಿಷ್ಠ ವೇತನವಿಲ್ಲ. ಗುತ್ತಿಗೆದಾರರು ಬೋನಸ್ ಸೇರಿದಂತೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುತ್ತಿಲ್ಲವೆಂದು ದೂರಿದರು.
ಸಮವಸ್ತ್ರ ಹಾಗೂ ಸುರಕ್ಷಾ ಸಲಕರಣೆಗಳು ಕಾರ್ಮಿಕರಿಗಿಲ್ಲ. ಬಹುತೇಕ ಎಲ್ಲಾ ಕಾರ್ಮಿಕ ಕಾಯ್ದೆಗಳನ್ನು ಕೈಬಿಡಲಾಗಿದೆ. ಕಾರ್ಮಿಕರ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ಒದಗಿಸಬೇಕು, ಶಾಲಾ-ಕಾಲೇಜುಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕು, ಸಾರಿಗೆ ಭತ್ಯೆ ಪ್ರತಿ ದಿನ 50 ರೂ. ಪಾವತಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆ ಈಡೇಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಮಹಾಂತೇಶ ಗೌಡ, ರವಿ ದಾದಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment