ಕಾರ್ಮಿಕರಿಗೆ ಆರ್ಥಿಕ ಸದೃಢತೆಗೆ ಸಲಹೆ

ತಿಪಟೂರು, ಜ. ೧೨- ಸರ್ಕಾರದ ವತಿಯಿಂದ ತಾಲ್ಲೂಕಿನ ಇಂಜಿನಿಯರಿಂಗ್ ಮತ್ತು ಪ್ಯಾಬ್ರೀಕೇಟಱ್ಸ್ ಅಸೋಸಿಯೇಷನ್‌ಗೆ ಹಲವಾರು ಯೋಜನೆಗಳನ್ನು ರೂಪಿಸುತ್ತೇನೆ ಎಂದು ಶಾಸಕ ಕೆ ಷಡಕ್ಷರಿ ತಿಳಿಸಿದರು.

ನಗರದ ರೇಣುಕಾ ಮಂದಿರದ ದೇವಾಸ್ಥಾನದ ಹತ್ತಿರ ನಡೆದ ಇಂಜಿನಿಯರಿಂಗ್ ಮತ್ತು ಪ್ಯಾಬ್ರಿಕೇಟಱ್ಸ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕೆಲಸ ಮಾಡುವ ಕಾರ್ಮಿಕರು ಸಂಘದ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ಸಲಹೆ ನೀಡಿದ ಅವರು, ಇಲ್ಲಿ ಕಾರ್ಮಿಕರು ಕಷ್ಟವನ್ನು ಲೆಕ್ಕಿಸದೆ ವೆಲ್ಡಿಂಗ್ ಮಾಡುತ್ತಿದ್ದಾರೆ. ಅನೇಕರು ತಮ್ಮ ಕಣ್ಣುಗಳನ್ನು ಕಳೆದುಕೂಂಡಿದ್ದು, ಅಂಥವರಿಗೆ ಇಂತಹ ಸಂಘಗಳು ಸಹಾಯಕಾರಿಯಾಗಿದ್ದು, ಸರ್ಕಾರದ ವತಿಯಿಂದ ಅಸೋಸಿಯೇಷನ್‌ಗೆ ಸಹಾಯ ಮಾಡಲು ಸಿದ್ದ ಎಂದರು.

ಸಂಘದ ಅಧ್ಯಕ್ಷ ಸಂಗಮೇಶ್ ಮಾತನಾಡಿ, ಸಂಘ ಬಲಪಡಿಸುವುದು ನಮ್ಮ ಗುರಿ. ಅವರು ಸ್ವಯಂ ಉದ್ಯೋಗ ಕಲ್ಪಿಸುವುದು ಹಾಗೂ ಬೇರೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದೇ ಆಗಿದೆ ಹಾಗೂ ಈ ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯಗಳನ್ನು ಬಳಸಿಕೂಳ್ಳುವುದು ಈ ಮೂಲಕ ಎಲ್ಲ ಸಂಘಟನೆಯ ಎಲ್ಲಾ ಸದಸ್ಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬ್ಯಾಂಕ್‌ಗಳ ಮೂಲಕ  ಸಾಲ ಸೌಲಭ್ಯ ಪಡೆದು ಪ್ರತಿಯೊಬ್ಬರು ಸ್ವಾವಲಂಬಿಗಳಾಗಬೇಕು. ನಮ್ಮ ಸಂಘವು ಯಜಮಾನನ ರೀತಿಯಲ್ಲಿದ್ದು, ಎಲ್ಲರೂ ಅದರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಸಂಘ ಎಲ್ಲರ ಬೆಳಕಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಗಾಂಧಿನಗರದ ನಿವಾಸಿ ನದೀಮ್ ಎಂಬುವರಿಗೆ  ಕೆಲಸದ ಸಮಯದಲ್ಲಿ ವಿದ್ಯುತ್ ಸ್ಪರ್ಶವಾಗಿ ಕಣ್ಣು ಮತ್ತು ಇತರೆ ಭಾಗಗಳಿಗೆ ಗಾಯಗೊಂಡು ಆತನಿಗೆ ಸಂಘದ ವತಿಯಿಂದ 25 ಸಾವಿರ ರೂ.ಗಳನ್ನು ಮಾಜಿ ಶಾಸಕ ಬಿ.ಸಿ. ನಾಗೇಶ್ ವಿತರಿಸಿದರು..

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಎಂ. ಎನ್ ಸುರೇಶ್, ಟೂಡಾ ಅಧ್ಯಕ್ಷ ಶಶಿಧರ್, ನಗರಸಭೆ ಸದಸ್ಯ ಟಿ.ಎನ್ ಪ್ರಕಾಶ್, ಸಂಘದ ಅಧ್ಯಕ್ಷ ಎಂ. ಆರ್.  ಸಂಗಮೇಶ್, ಉಪಾಧ್ಯಕ್ಷ ಟಿ.ಎನ್. ಜಯರಾಮ್, ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜೇಶ್, ಸಹ ಕಾರ್ಯದರ್ಶಿ ಪ್ರಸಾದ್, ಖಜಾಂಚಿ ರೆಹಮಾನ್, ಅಬೀಬ್  ಸಂಘಟನೆ ಕಾರ್ಯದರ್ಶಿ ಜಾನ್ ಸಂತೋಷ್, ಕೆರೆ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment