ಕಾರ್ಮಿಕನ ಮೃತದೇಹ ರಸ್ತೆಬದಿ ಪತ್ತೆ

ಮಂಜೇಶ್ವರ, ಮೇ ೧೯- ವಯರಿಂಗ್ ಕೆಲಸ ಮಾಡುವ ವ್ಯಕ್ತಿಯ ಮೃತದೇಹ ಕೆಳಗಿನ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಪರಿಸರದಲ್ಲಿ ಕಂಡುಬಂದಿದೆ.

ಬಂಗ್ರಮಂಜೇಶ್ವರ ಸಸಿಹಿತ್ಲು ನಿವಾಸಿ ದಿ| ಈಶ್ವರ ಎಂಬವರ ಪುತ್ರ ಸುಕುಮಾರ (೪೬) ಎಂಬವರ ಮೃತದೇಹ ಕಂಡುಬಂದಿದ್ದು, ಕೂಡಲೇ ಸ್ಥಳೀಯರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದರು. ನಿನ್ನೆ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಕುಸಿದುಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಮೃತರು ತಾಯಿ ಅಮ್ಮುಣಿ, ಪತ್ನಿ ಮಂಜುಳಾ, ಮಕ್ಕಳಾದ ಚೈತ್ರ, ಜಿತೇಶ್, ಸಹೋದರರಾದ ಸುರೇಂದ್ರ, ರವಿಚಂದ್ರ, ಸಹೋದರಿಯರಾದ ಚಂಚಲಾಕ್ಷಿ, ಗೀತಾ, ಬೇಬಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Comment