ಕಾರ್ನಾಡ್ ಸಾವನ್ನು ಸಂಭ್ರಮಿಸಿದ ನಡೆಗೆ ಸಿದ್ದು ಕಿಡಿ

ಬೆಂಗಳೂರು, ಜೂ ೧೧- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಸಾವಿನಲ್ಲೂ ವಿಕೃತಿ ಮೆರೆದವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಹಿರಿಯ ಸಾಹಿತಿ, ಹೋರಾಟಗಾರರು, ಜ್ಞಾನಪೀಠ ಪುರಸ್ಕೃತರೂ ಆಗಿದ್ದ ಗಿರೀಶ್ ಕಾರ್ನಾಡ್ ಆರೋಗ್ಯ ಸಮಸ್ಯೆ ತುತ್ತಾಗಿ ನಿನ್ನೆ ಕೊನೆಯುಸಿರೆಳೆದರು, ಸೈದ್ಧಾಂತಿಕ ವಿರೋಧಿಗಳು ಅವರ ಸಾವನ್ನು ಸಂಭ್ರಮಿಸಿ ವಿಕೃತಿ ಮೆರೆದಿರುವುದಕ್ಕೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯ. ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸ್‌ನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ. ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಂಭ್ರಮಿಸುವಂತ ಶತೃಗಳಾಗಬಾರದು. ಬಿತ್ತಿದ್ದನ್ನೇ ಫಸಲಾಗಿ ಪಡೆಯುತ್ತೇವೆ’. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ. ಎಂದು ಕರೆ ನೀಡಿದ್ದಾರೆ.

ಸಾವಿನ ಸಂಭ್ರಮ ಕೊಲೆಯಷ್ಟೆ ಘೋರ ಕೃತ್ಯ. ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸಿಗನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ. ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಾವು ಸಂಭ್ರಮಿಸುವಂಥ ಶತ್ರುಗಳಾಗಬಾರದು.
ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ ಎಂದು ಟ್ವಿಟ್ ಮಾಡಿ ಕರೆ ನೀಡಿದ್ದಾರೆ. ಕಾರ್ನಾಡ್ ಅವರ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿರೋಧಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅನೇಕ ಪೋಸ್ಟ್‌ಗಳನ್ನು ಹಾಕುವ ಮೂಲಕ ಅವರ ಸಾವನ್ನು ಸಂಭ್ರಮಿಸಿದ್ದರು, ಈ ನಡೆ ಅನೇಕರನ್ನು ಕೆರಳಿಸಿತ್ತು.

Leave a Comment