ಕಾರ್ನಾಡ್ ಬದುಕು ಸ್ಮರಿಸಿ ಕಣ್ಣೀರಿಟ್ಟ ಪುತ್ರ

ಬೆಂಗಳೂರು, ಜೂ. ೧೩- ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡರು ನಿಧನರಾಗಿ 4 ದಿನಗಳು ಕಳೆದ ನಂತರ ಪುತ್ರ ರಘುಕಾರ್ನಾಡ್ ಅವರು ತಂದೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಬರಹವೊಂದನ್ನು ಪ್ರಕಟಿಸಿದ್ದಾರೆ.
ನನ್ನ ತಂದೆ ಕಾರ್ನಾಡ್ ಅವರದು ಅದ್ಭುತ್ವ ವ್ಯಕ್ತಿತ್ವ. ಅವರ ವ್ಯಕ್ತಿತ್ವವನ್ನು ಗೌರವಿಸಿದ ಹಾಗೂ ಸ್ವೀಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಮನೆಯಲ್ಲಿ ನನ್ನ ತಂದೆಯ ಚಟುವಟಿಕೆಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಅವರು ಕೂರುತ್ತಿದ್ದ ಸೋಫಾ, ವಿಸ್ಕಿ ಸೇವಿಸುತ್ತಿದ್ದ ಸ್ಟೈಲ್, ವಿಸ್ಕಿ ಗ್ಲಾಸ್ ಹಿಡಿಯುತ್ತಿದ್ದ ದಾಟಿ ಎಲ್ಲವೂ ನನ್ನ ಕಣ್ಣು ಮುಂದೆ ತೇಲಿ ಹೋಗುತ್ತಿದೆ. ನಾನು ಪ್ರೀತಿಸಿದ ಅತ್ಯದ್ಭುತ ವ್ಯಕ್ತಿ ಎಂದರೆ ನನ್ನ ತಂದೆ ಕಾರ್ನಾಡರೇ ಎಂದು ರಘು ತಿಳಿಸಿದ್ದಾರೆ.
ಭಾನುವಾರ ಕುಟುಂಬದ ಸದಸ್ಯರೆಲ್ಲರೂ ಮಹಡಿಯ ಮೇಲೆ ಕುಳಿತು ಪರಸ್ಪರ ವಿಚಾರ ವಿನಿಮಯದ ಮೂಲಕ ಕಾಲಕಳೆದಿದ್ದೆವು. ಈ ವೇಳೆ ತಂದೆಯ ಅನಾರೋಗ್ಯದ ವಿಚಾರ ಕುರಿತಂತೆಯೂ ನಮ್ಮಲ್ಲಿ ಬೇಸರವುಂಟಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆಯೇ ನನ್ನ ತಂದೆ ಕಾರ್ನಾಡರು ನಿಧನ ಹೊಂದಿದ್ದಾಗಿ ತಿಳಿಸಿದ್ದಾರೆ.
ನನ್ನ ತಂದೆಯ ಬದುಕಿನಲ್ಲಿ ಸ್ನೇಹಿತರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರೊಂದಿಗಿದ್ದ ವ್ಯಕ್ತಿಗಳು ಕೆಲ ಕುಡಿತದ ಜೊತೆಗಾರರು ಸಹ ಹೆಸರನ್ನೂ ಸಹ ನಾನು ತಿಳಿದುಕೊಂಡಿದ್ದೆ. ನನ್ನ ತಂದೆಯ ಅದ್ಬುತ ಬದುಕು ರೂಪಿಸಲು ಅವರೊಂದಿಗಿದ್ದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎನ್ನುವ ಮೂಲಕ ರಘು ತಂದೆ ಕಾರ್ನಾಡರಿಗೆ ಭಾವನಾತ್ಮಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Leave a Comment