ಕಾರ್ನಾಡರ ನಿಧನಕ್ಕೆ ಕಸಾಪ ಸಂತಾಪ

ಬಳ್ಳಾರಿ, ಜೂ.10: ಬಳ್ಳಾರಿ: ಜ್ಙಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ,ಅತ್ಯುತ್ತಮ ನಟ,ನಿರ್ದೇಶಕ, ಸಮಾಜ ಚಿಂತಕ,ಕನ್ನಡ ಅಸ್ಮಿತೆಯ ಪ್ರತೀಕವಾದ ಗಿರೀಶ್ ಕಾರ್ನಾಡ್ ರವರು ಕೊನೆಯುಸಿರೆಳೆದಿದ್ದು ಕನ್ನಡ ನಾಡಿಗಾದ ಬಹು ದೊಡ್ಡ ನಷ್ಠವಾಗಿದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಕಂಬನಿ‌ ಮಿಡಿದಿದ್ದಾರೆ.

ಬಹು ಆಯಾಮಗಳಲ್ಲಿ ತಮ್ಮ‌ಪ್ರತಿಭೆ ಅನಾವರಣಗೊಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದ್ದ ಕಾರ್ನಾಡರು ಕನ್ನಡಿಗರ ಸೃಜನಶೀಲ ಮನಸ್ಸಿನ ಮಾದರಿಯಾಗಿದ್ದರು. ಸಾಹಿತಿಯಾಗಲ್ಲದೆ ಚಿತ್ರರಂಗದಲ್ಲೂ ಗಣನೀಯ ಸಾಧನೆಗೈದ ಅವರಿಗೆ ಪದ್ಮಶ್ರೀ ಸೇರಿದಂತೆ ಅನೇಕ ಪ್ರತಿಷ್ಠಿತ ಪುರಸ್ಕಾರಗಳು ಮುಡಿಗೇರಿದ್ದವು. 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಕನ್ನಡದ ಜೊತೆಗೆ ಮರಾಠಿ ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದರು.ಪ್ರಾಧ್ಯಾಪಕರಾಗಿ ಯೂ ಸೇವೆ ಸಲ್ಲಿಸಿದ ಅವರು ನೇರ ನುಡಿಯ ದಿಟ್ಟ ವಾಗ್ಮಿಯಾಗಿದ್ದರು.ಸಾಮಾಜಿಕ ಚಿಂತನೆಯನ್ನು ಹಾಸುಹೊಕ್ಕಾಗಿ ಮೈಗೂಡಿಸಿಕೊಂಡಿದ್ದರು.ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಜಾನಪದ, ಐತಿಹಾಸಿಕ, ಪುರಾಣ ವಸ್ತುವನ್ನೊಳಗೊಂಡ ನಾಟಕಗಳ ರಚನೆಯ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದರು ಅವರ ಆತ್ಮಕ್ಕೆ ಶಾಂತಿ ಕೋರುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ಶ್ರದ್ದಾಂಜಲಿ ಕೋರಿ ತೀವ್ರ ಸಂತಾಪ ಸೂಚಿಸುತ್ತೇವೆ ಎಂದಿದ್ದಾರೆ.

 

Leave a Comment