ಕಾರು ಚಾಲಕನೊಂದಿಗೆ ಅನೈತಿಕ ಸಂಬಂಧ ಯೋಧನ ಹತ್ಯೆ-ಪತ್ನಿ-ಪ್ರಿಯಕರ ಪೊಲೀಸ್ ಬಲೆ

ಬೆಳಗಾವಿ,ಫೆ,೨೩ಪ್ರಿಯಕರನೊಂದಿಗೆ ಸೇರಿ ಯೋಧ ಪತಿಯನ್ನು ಕೊಲೆಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬೆಳಗಾವಿ ತಾಲ್ಲೂಕು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯೋಧ ದೀಪಕ್ ಪತ್ನಿ ಅಂಜಲಿ ಮತ್ತು ಪ್ರಿಯಕರ ಪ್ರಶಾಂತ್ ಬಂಧಿತ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದ ನವೀನ್ ಕೆಂಗೇರಿ ಮತ್ತು ಪ್ರವೀಣ್ ಪರಾರಿಯಾಗಿದ್ದರು. ಅವರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದರು.

ಪತಿ ಯೋಧ ದೀಪಕ್ ಪತ್ನಿ ಅಂಜಲಿಗೆ ಕಾರು ಕೊಡಿಸಿದ್ದರು. ಕಾರು ಚಾಲಕನಾಗಿ ಪ್ರಶಾಂತ್ ಎಂಬುವನನ್ನ ನೇಮಿಸಿದ್ದರು. ಈ ವೇಳೆ ಪ್ರಶಾಂತ್ ಮತ್ತು ಅಂಜಲಿ ನಡುವೆ ಅಕ್ರಮ ಸಂಬಂಧ ಬೆಳೆದಿದ್ದು ಇದು ದೀಪಕ್ ಗೆ ಗೊತ್ತಾಗಿತ್ತು. ಹೀಗಾಗಿ ಪತ್ನಿ ಅಂಜಲಿಗೆ ದೀಪಕ್ ಬುದ್ಧಿವಾದ ಹೇಳಿದ್ದರೂ , ಅಂಜಲಿ, ಪ್ರಶಾಂತ್ ಅಕ್ರಮ ಸಂಬಂಧ ಮುಂದುವರಿದಿತ್ತು.

ಈ ನಡುವೆ ಯೋಧ ದೀಪಕ್ ತವರಿಗೆ ವಾಪಸ್ ಆಗಿದ್ದು ಈ ವೇಳೆ ಪತಿ ದೀಪಕ್ ರನ್ನ ಕೊಲೆ ಮಾಡಲು ಪತ್ನಿ ಅಂಜಲಿ ಹಾಗೂ ಪ್ರಿಯಕರ ಪ್ರಶಾಂತ್ ನಿರ್ಧರಿಸಿದ್ದಾರೆ. ದೀಪಕ್ ರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಅಂಜಲಿ ಮತ್ತು ಪ್ರಶಾಂತ್ ಅವರು ನವೀನ್ ಮತ್ತು ಪ್ರವೀಣ್ ಜೊತೆಗೆ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಬಳಿಕ ಪತಿ ನಾಪತ್ತೆಯಾಗಿರುವುದಾಗಿ ಪತ್ನಿ ಅಂಜಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ವೇಳೆ ತನಿಖೆ ನಡೆಸಿದ ಪೊಲೀಸರು ಕಾಲ್ ಡಿಟೇಲ್ ಪರಿಶೀಲಿಸಿದಾಗ ಅಂಜಲಿ ಮತ್ತು ಪ್ರಶಾಂತ್ ನಡುವೆ ಹೆಚ್ಚಿನ ಮಾತುಕತೆ ನಡೆದಿರುವುದು ಗೊತ್ತಾಗಿದೆ. ಅವರನ್ನು ವಿಚಾರಣೆಗೊಳಪಡಿಸಿದಾಗ ಅಂಜಲಿ ಮತ್ತು ಪ್ರಶಾಂತ್ ನಡುವೆ ಅನೈತಿಕ ಸಂಬಂಧ ಮತ್ತು ದೀಪಕ್ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಕೂಡಲೇ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಂಜಲಿ ಮತ್ತು ಪ್ರಶಾಂತ್ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Leave a Comment