ಕಾರು ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ಮನೋಹರ ಡ್ಯಾನಿ ದುರ್ಮರಣ

 

ಕಾಳಗಿ,ಸೆ.11-ಪಟ್ಟಣದ ಹೊರವಲಯದ ಕೆ.ಇ.ಬಿ ಹತ್ತಿರದ ಹೊಡಪೇಟ್ ಹಣಾದಿ ಬ್ರಿಜ್ ಕೆಳಗೆ ಕಾರು ಉರುಳಿ ಬಿದ್ದು, ಕಲಬುರಗಿಯ ಕುಸನೂರ ರಸ್ತೆಯ ಧನ್ವಂತರಿ ಕಾಲೋನಿ ನಿವಾಸಿ, ಕಾಂಗ್ರೆಸ್ ಮುಖಂಡ ಹಾಗೂ ಕಲಬುರಗಿ ತಾಲ್ಲೂಕ ಪಂಚಾಯತಿ ಮಾಜಿ ಅಧ್ಯಕ್ಷ ಮನೋಹರ ಅಲಿಯಾಸ್ (ಡ್ಯಾನಿ) ತಂದೆ ತುಕಾರಾಮ ಕಾಂಬಳೆ (60) ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಎರಡುಗಂಟೆ ಸುಮಾರಿಗೆ ಚಿಂಚೋಳಿಯಿಂದ ಕಲಬುರಗಿಗೆ ಕಡೆಗೆ ಹೋಗುತ್ತಿದ್ದಾಗ ಹೊಡಪೇಟ್ ಹಣಾದಿ ಬ್ರಿಜ್ ಕೆಳಗೆ ಕಾರು ಉರುಳಿ ಬಿದ್ದು ಮೃತಪಟ್ಟಿದ್ದು, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸುದ್ದಿ ತಿಳಿದು ಕಾಳಗಿ ಸಿಪಿಐ ಡಿ.ಬಿ.ಕಟ್ಟಿಮನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

 

Leave a Comment