ಕಾರುಗಳ ಡಿಕ್ಕಿ:

ಚಾಲಕರು ಪ್ರಾಣಾಪಾಯದಿಂದ ಪಾರು
ಮೈಸೂರು. ಸೆ.22. ನಗರದ ಸಿದ್ದಪ್ಪ ವೃತ್ತದಲ್ಲಿ ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದರೂ ಯಾವುದೇ ಪ್ರಾಣಾಪಾಯವಾಗಿಲ್ಲದ ಘಟನೆ ಸಂಭವಿಸಿದೆ.
ಮೈಸೂರಿನ ಕುವೆಂಪುನಗರ ನಿವಾಸಿ ಆಕಾಶ್(33) ಎಂಬುವವರು ನಿನ್ನೆ ಬೆಂಗಳೂರಿನಲ್ಲಿ ತಮ್ಮ ವೈಯುಕ್ತಿಕ ಕೆಲಸಗಳನ್ನು ಮುಗಿಸಿಕೊಂಡು ಕುವೆಂಪು ನಗರದಲ್ಲಿನ ಮನೆಗೆ ಫಾರ್ಚೂನ್ ಕಾರಿನಲ್ಲಿ ವಾಪಸ್ಸು ಬರುತ್ತಿದ್ದಾಗ ನಾರಾಯಣ ಶಾಸ್ತಿ ಕಡೆಯಿಂದ ಬಂದ ಮತ್ತೊಂದು ಕಾರು ಆಕಾಶ್ ರವರ ಕಾರಿಗೆ ಢಿಕಿ ಹೊಡೆದ ಪರಿಣಾಮ ಆಕಾಶ್ ರವರ ಕಾರು 3 ಬಾರಿ ಪಲ್ಟಿ ಹೊಡೆಯಿತು ಢಿಕ್ಕಿಯ ರಭಸಕ್ಕೆ ಎರಡೂ ಕಾರುಗಳಲ್ಲಿದ್ದ ಏರ್ ಬ್ಯಾಗ್‍ಗಳು ತೆರೆದುಕೊಂಡಿದ್ದರಿಂದ ಇಬ್ಬರೂ ಚಾಲಕರಿಗೂ ಸಣ್ಣಪುಟ್ಟಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ವಿಷಯ ತಿಳಿದ ಕೆ.ಆರ್. ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಇಬ್ಬರೂ ಚಾಲಕರಿಗೂ ಚಿಕಿತ್ಸೆ ಕೊಡಿಸಿ ಅವರವರ ಮನೆಗೆ ಕಳುಹಿಸಿಕೊಟ್ಟರು. ಈ ಪ್ರಕರಣ ಕುರಿತು ಕೆ.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

Leave a Comment