ಕಾರುಗಳು ಪಲ್ಟಿ ನಾಲ್ವರು ಪಾರು

ಬೆಂಗಳೂರು,ಸೆ.೧೦- ಹತ್ತು ನಿಮಿಷದ ಅಂತರದಲ್ಲಿ ಒಂದೇ ಜಾಗದಲ್ಲಿ ಎರಡು ಕಾರುಗಳು ಪಲ್ಟಿಯಾಗಿ ಸಂಪೂರ್ಣ ನಜ್ಜು ಗುಜ್ಜಾದರೂ ಕಾರಿನಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೭ರ ಆರೂರು ಬಳಿ ನಡೆದಿದೆ.

ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಎರಡು ಕಾರುಗಳು ಪಲ್ಟಿಯಾಗಿವೆ. ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ಮೊದಲು ಬಿಳಿ ಬಣ್ಣದ ಮಹಾರಾಷ್ಟ್ರ ರಾಜ್ಯ ನೊಂದಣಿಯ ಎಂಎಚ್ ೩೨ ಎಎಚ್ ೦೮೮೯ ನಂಬರಿನ ಕಾರು ಪಲ್ಟಿಯಾಗಿ ಹೆದ್ದಾರಿಯಿಂದ ಎಡಗಡೆ ಕೆಡೆಗೆ ಬಿದ್ದಿದೆ.
ಅದಾದ ಕೆಲವೇ ನಿಮಿಷಗಳಲ್ಲಿ ಕೆಎ ೦೩ ಎನ್ ಬಿ ೭೨೫೭ ನಂಬರಿನ ಮತ್ತೊಂದು ಕಾರು ಅದೇ ಜಾಗದಲ್ಲಿ ಪಲ್ಟಿಯಾಗಿ ಹೆದ್ದಾರಿಯಿಂದ ಬಲಗಡೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರುಗಳಲ್ಲಿದ್ದ ನಾಲ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಲ್ಟಿಯಾದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave a Comment