ಕಾರಿಗೆ ಬೈಕ್ ಡಿಕ್ಕಿ- ಸವಾರರಿಗೆ ಗಂಭೀರ ಗಾಯ

ಮೈಸೂರು ಜು 11- ಇನ್ನೋವ ಕಾರು ಹಾಗೂ ಹೋಂಡಾ ಅಕ್ಟೀವ್ ಬೈಕ್ ನಡುವೆ ಡಿಕ್ಕಿ ನಡೆದ ಪರಿಣಾಮ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮದ್ಯಾಹ್ನ ಬನ್ನಿ ಮಂಟಪದ ಡಾಲ್ಪಿನ್ ಬೇಕರಿ ಎದುರು ನಡೆದಿದೆ.
ಇಂದು ಮದ್ಯಾಹ್ನ 12:30 ರ ಸಮಯದಲ್ಲಿ ಇಬ್ಬರೂ ಯುವಕರು ಹೋಂಡಾ ಆಕ್ಟೀವ ಬೈಕಿನಲ್ಲಿ ಬನ್ನಿಮಂಟಪದ ಕಡೆಗೆ ವೇಗವಾಗಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮುಂದಿನ ವಾಹನಕ್ಕೆ ಓವರ್ ಟೇಕ್ ಮಾಡಲು ಯತ್ನಿಸಿದಾಗ ಎಲ್.ಐ.ಸಿ ಕಡೆಯಿಂದ ಬಂದ ಇನ್ನೋವ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದರು.
ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕರನ್ನು ತಕ್ಷಣ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯಿತು. ಈ ಯುವಕರ ಬಗ್ಗೆ ಯಾವುದೇ ರೀತಿ ಮಾಹಿತಿ ತಿಳಿದು ಬಂದಿಲ್ಲ. ಎನ್. ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment