ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಗೆ ಆಸರೆಯಾದ ಅಪ್ಪು

ಬೆಂಗಳೂರು, ಫೆ 12- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಬೇಕೆಂದು ಜೀವ ಕೈನಲ್ಲಿ ಹಿಡಿದು ಕಾಯುತ್ತಿದ್ದ ಅಭಿಮಾನಿ ಬಾಲಕನೊಬ್ಬನಿಗೆ ಅಪ್ಪು ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅಭಿಮಾನಿ ಬಾಲಕನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆತನ ಕಾಯಿಲೆಯ ವೆಚ್ಚ ಭರಿಸುವ ಮೂಲಕ ಆಸರೆಯಾಗಿದ್ದಾರೆ. ಪುನೀತ್ ರಾಜ್ ಕುಮಾರ್‌ನ ಪುಟ್ಟ ಅಭಿಮಾನಿ ಆದರ್ಶ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಾಲಕನಿಗೆ ಪುನೀತ್ ರಾಜ್ ಕುಮಾರ್ ಅಂದರೆ ಪಂಚಪ್ರಾಣ. ಒಮ್ಮೆಯಾದರು ಪವರ್ ಸ್ಟಾರ್ ರನ್ನು ನೋಡಬೇಕು, ಮತನಾಡಬೇಕೆನ್ನುವ ಆಸೆ. ಅನೇಕ ತಿಂಗಳಿಂದ ಪುನೀತ್ ನೋಡುವ ಕನಸು ಕಾಣುತ್ತ ಜೀವ ಕೈಯಲ್ಲಿ ಹಿಡಿದು ಕಾಯುತ್ತಿದ್ದರು.

appu1

ಈ ೧೬ ವರ್ಷದ ಪುಟ್ಟ ಬಾಲಕ ಆದರ್ಶ್ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಇಂದಿರ ನಗರದ ನಿವಾಸಿ, ಹನುಮಂತ ಮತ್ತು ರೇಖಾ ದಂಪತಿಯ ಹಿರಿಯ ಪುತ್ರ. ಈ ಬಾಲಕ ಹುಟ್ಟಿದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಪುಟ್ಟ ಬಾಲಕನ ಅಭಿಮಾನ ಕಂಡು ಪುನೀತ್ ಮನ ಕರಗಿದೆ. ಬಾಲಕನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ನಿನ್ನೆ ಪುನೀತ್ ಮನಗೆ ಬಂದ ಆದರ್ಶ್ ಮತ್ತು ಕುಟುಂಬದವರನ್ನು ಪವರ್ ಸ್ಟಾರ್ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಕೆಲವು ಸಮಯ ಅವರ ಜೊತೆ ಕಳೆದಿದ್ದಾರೆ. ಪುಟ್ಟ ಬಾಲಕನ ಮುಖದಲ್ಲಿ ನೆಚ್ಚಿನ ನಟನನ್ನು ನೋಡಿದ ಸಂತಸ ಕಾಣುತ್ತಿತ್ತು.

ಪವರ್ ಸ್ಟಾರ್ ಪುಟ್ಟ ಬಾಲಕನನ್ನು ಕರೆಸಿಕೊಂಡು ಮಾತನಾಡಿಸಿ ಆತನ ಆಸೆ ಈಡೇರಿಸಿದ್ದು ಅಷ್ಟೆಯಲ್ಲ. ಆತನ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಪುನೀತ್ ಹೇಳಿದ್ದಾರೆ. ಈ ವಿಚಾರವನ್ನು ಪುನಿತ್ ಅಭಿಮಾನಿ ಬಳಗ ಹಂಚಿಕೊಂಡಿದ್ದು, ಅಪಾರ ಅಭಿಮಾನಿಗಳು ಅಪ್ಪುವಿನ ಮಾನವೀಯತೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

Leave a Comment