ಕಾಯಕದಿಂದ ಜ್ಞಾನ ವೃದ್ಧಿ-ಶಿವಾಚಾರ್ಯಶ್ರೀ

ಧಾರವಾಡ ಫೆ.20- ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಂದೇ ನಾಣ್ಯದಎರಡು ಮುಖಗಳಿದ್ದಂತೆ ಎಂದು ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಿಮ್ಮಾಪುರದ ವಿದ್ಯಾಚೇತನ ಶಿಕ್ಷಣ ಸಂಸ್ಥೆಯಜ್ಞಾನಜ್ಯೋತಿ ವಿದ್ಯಾಲಯದ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ನಿತ್ಯ ಕಾಯಕ ಮಾಡುವವರಿಗೆಜ್ಞಾನ ಬಹುಬೇಗ ಲಭ್ಯವಾಗುತ್ತದೆ. ಜ್ಞಾನಾರ್ಜನೆಯ ಕಾರ್ಯ ಅತ್ಯಂತ ಪವಿತ್ರವಾದದ್ದು. ಮತ್ತೊಬ್ಬರಿಗೆಜ್ಞಾನ ನೀಡಿದಾಗ ನಮ್ಮಲ್ಲಿರುವಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಗೇರ ಮಾತನಾಡಿ, ವಿದ್ಯಾಲಯಗಳು ಹೊಸ ಕಲಿಕೆಯತಾಣ. ಇಲ್ಲಿ ಪ್ರತಿಕ್ಷಣವು ವಿದ್ಯಾರ್ಥಿಗಳಿಗೆ ಜ್ಞಾನಧಾರೆಯಾಗುತ್ತದೆ. ಜ್ಞಾನಜ್ಯೋತಿ ವಿದ್ಯಾಲಯ ಕಳೇದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋನ್ಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಛದ್ಮವೇಷ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾಚೇತನ ಶಿಕ್ಷಣ ಸಂಸ್ಥೆಯಅಧ್ಯಕ್ಷ ಪಿ.ಆರ್. ಹಿರೇಮಠ, ನಿರ್ದೇಶಕ ಮೃತ್ಯುಂಜಯ ಹಿರೇಮಠ, ಡಾ. ಎಮ್.ಪಿ. ಜಂಗವಾಡ, ಶಾಲಾ ಮುಖ್ಯೋಪಾಧ್ಯಯಿನಿ ಹರ್ಷಾ ಮೋಗೇರ, ಟಿ.ಎಸ್. ಹಿರೇಮಠ,ಗ್ರಾಮ ಪಂಚಾಯತಿಅಧ್ಯಕ್ಷಚನ್ನಬಸಪ್ಪ ಮೊರಬದ, ಅಡಿವೆವ್ವಜತ್ತಿನಗೌಡರ, ಮಹಾಂತಯ್ಯ ಹಿರೇಮಠಹಾಗೂ ಇತರರು ಪಾಲ್ಗೊಂಡಿದ್ದರು.

Leave a Comment