ಕಾಮೋತ್ತೇಜಕ ಮಾತ್ರೆ ಮಾರಾಟ ಇಬ್ಬರು ಖದೀಮರ ಸೆರೆ

ಬೆಂಗಳೂರು,ಏ.೨೦- ವಯಾಗ್ರಾ ಸೇರಿದಂತೆ ಕಾಮೋತ್ತೇಜಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ)ದ ಅಧಿಕಾರಿಗಳು ೪೦ ಲಕ್ಷ ಮೌಲ್ಯದ ಮಾದಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹ್ಮದ್ ಸುಹೇಲ್, ಸಲೀಮ್ ಪಾಷಾ ಬಂಧಿತ ಆರೋಪಿಗಳಾಗಿದ್ದಾರೆ,ವಯಾಗ್ರ ಹಾಗೂ ಮತ್ತು ತರಿಸುವ ಮಾತ್ರೆಗಳನ್ನು ಥಣಿಸಂದ್ರ ಮುಖ್ಯ ರಸ್ತೆಯ ಇಂಟರ್‌ನೆಟ್ ಔಷಧಾಲಯದಲ್ಲಿ ಶೇಖರಿಸಿ ಮಾರಾಟ ಮಾಡುತ್ತಿದ್ದ ಮಾಹಿತಿ ಕಾರ್ಯಾಚರಣೆ ನಡೆಸಿದ ಎನ್‌ಸಿಬಿಯ ಅಧಿಕಾರಿಗಳು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.
ಆರೋಪಿಗಳು ಅಂತರ್ಜಾಲದ ಮೂಲಕ ವಿದೇಶಕ್ಕೂ ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದು ವಿದೇಶಗಳಿಂದ ಆರ್ಡರ್ ಪಡೆದು ಮಾರಾಟ ಮಾಡುತ್ತಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.ಬಂಧಿತರಿಂದ ೪೦ ಲಕ್ಷ ಮೌಲ್ಯದ ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Leave a Comment