ಕಾಮಿಡಿ ಲಂಬೋದರ

ಲೂಸ್‌ಮಾದ ಖ್ಯಾತಿಯ ಯೋಗೇಶ್ ನಟಿಸಿರುವ ಲಂಬೋದರ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಹಾಡುಗಳನ್ನು ಬಿಡುಗಡೆಗೊಳಿಸಲಾಗಿದೆ ಪುಟ್ಟಗೌರಿ ಶೀರ್ಷಿಕೆ ಗೀತೆಯಿಂದ ಖ್ಯಾತಿ ಪಡೆದಿರುವ ಕಾರ್ತಿಕ್ ಶರ್ಮ ಲಂಬೋದರ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಕಳೆದ ಗುರುವಾರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಕೆ.ಕೃಷ್ಣರಾಜು ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರದ ಮಹೂರ್ತ ನಡೆಸಿ ಚಿತ್ರೀಕರಣ ಆರಂಭಿಸಲಾಗಿತ್ತು ಅದೇ ತಿಂಗಳಲ್ಲಿ ಆಡಿಯೋ ಸಿಡಿ ಹೊರಬರುತ್ತಿರುವುದು ಖುಷಿಯಾಗಿದೆ. ಚಿತ್ರವು ಸಂಪೂರ್ಣ ಹಾಸ್ಯಪ್ರದಾನವಾಗಿದ್ದು, ಯೋಗಿ ಅವರನ್ನು ದೃಷ್ಠಿಯಲ್ಲಿಟ್ಟುಕೊಂಡು ಕತೆ ಬರೆಯಲಾಗಿದೆ ಅವರನ್ನು ಬಿಟ್ಟರೆ ಮತ್ಯಾರೂ ಇಂತಹ ಕತೆಗೆ ಸೂಕ್ತವಾಗುತ್ತಿರಲಿಲ್ಲ ಎನ್ನುತ್ತಾರೆ.

film-lambodara_142

ಲಂಬೋದರನ ಅಡಿಬರಹದಲ್ಲಿ ಬಸವನಗುಡಿ ಬೆಂಗಳೂರು ಎಂದು ಹೇಳಲಾಗಿದ್ದು, ಸಿನಿಮಾವು ಅದೇ ಭಾಗದಲ್ಲಿ ನಡೆಯುತ್ತದೆ. ಎರಡು ಹಾಡುಗಳನ್ನು  ಪುನೀತ್‌ರಾಜ್‌ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಕೇರಳದ  ಅಂದ ಪ್ರತಿಭೆ ವೈಕಮ್‌ವಿಜಯಲಕ್ಷೀ ಟೈಟಲ್ ಸಾಂಗ್‌ಗೆ ಧ್ವನಿಯಾಗಿದ್ದಾರೆ ಜನವರಿ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮದುವೆಯಾಗಿ ಮೂರೇ ದಿನಕ್ಕೆ  ನಿರ್ದೇಶಕರು ಲಂಬೋದರನ ಚಿತ್ರೀಕರಣಕ್ಕೆ ಕರೆಸಿಕೊಂಡರು. ಮೂರು ಶೇಡ್‌ಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಮದ್ಯಮ ವರ್ಗದವರ ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕತೆಯಾಗಿದೆ. ಆಗ ತಾನೇ ಕಾಲೇಜು ಮುಗಿಸಿ ಗೊತ್ತು ಗುರಿಯಿಲ್ಲದೆ ಯಾವ ರೀತಿ ಇರುತ್ತಾನೆಂದು  ತೋರಿಸಲಾಗಿದೆ. ಹಾಡುಗಳು  ಚೆನ್ನಾಗಿ ಬಂದಿರುವುದರಿಂದ ನನ್ನ ಮುಂದಿನ ಚಿತ್ರಕ್ಕೂ ಕಾರ್ತಿಕ್ ಶರ್ಮ ಸಂಗೀತ ನಿರ್ದೇಶಕರಾಗುತ್ತಾರೆ.ನೀವು ಇತರ ಸಿನಿಮಾಗಳಿಗಿಂತ ಲಂಬೋದರದಲ್ಲಿ ಬಹಳ ಚೆನ್ನಾಗಿ ಕಾಣುತ್ತೀರ ಎಂದು ಪತ್ನಿ ಸಾಹಿತ್ಯ ಕಾಂಪ್ಲಿಮೆಂಟ್ಸ್ ಕೂಡಾ ನೀಡಿರುವುದು ನನಗೆ ಖುಷಿ ತಂದಿದೆ ಎಂದರು ನಾಯಕ ಯೋಗಿ.

ಪುಟ್ಟಗೌರಿಮದುವೆ, ಕಿನ್ನರಿ ಧಾರವಾಹಿ ಶೀರ್ಷಿಕೆ ಗೀತೆಗೆ ಸಂಗೀತ ಸಂಯೋಜಿಸಿದ್ದ ನಾನು ಮೊದಲ ಬಾರಿ ಕಮರ್ಷಿಯಲ್ ಚಿತ್ರಕ್ಕೆ ಅವಕಾಶ ಸಿಕ್ಕಿ ಲಂಬೋದರನಿಗೆ ಸಂಗೀತ ನೀಡಿ ಚಿತ್ರದ ಓ ಮನಸೇ  ಗೀತೆಯನ್ನು ಹಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಕಾರ್ತಿಕ್‌ಶರ್ಮ ಸಂತಸ ಹಂಚಿಕೊಂಡರು

ಸಿಡಿ ಬಿಡುಗಡೆ ಮಾಡಿದ  ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಅವರು ಚಿತ್ರರಂಗಕ್ಕೆ ಹಲವು ಮಂದಿ ಕಲಾವಿದರು ತಂತ್ರಜ್ಞರು ಬರುತ್ತಿದ್ದು ಅವರೆಲ್ಲರೂ ಚಿತ್ರರಂಗಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಲಂಬೋದರ ಚಿತ್ರವು ಉತ್ತಮವಾಗಿ ಮೂಡಿಬಂದಿರುವುದನ್ನು ಹಾಡುಗಳ ಮೇಕಿಂಗ್ ನೋಡೊದರೆ ಗೊತ್ತಾಗಲಿದೆ ಹಾಡುಗಳಂತೆ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು. .ಸಾಹಿತಿ ಹರ್ಷಪ್ರಿಯಾ, ಸಂಕಲನಕಾರ ಹರೀಶ್, ಕರಿಸುಬ್ಬು, ನಿರ್ಮಾಪಕರಲ್ಲಿ ಒಬ್ಬರಾದ ಉಡುಪಿಯ ರಾಘವೇಂದ್ರಭಟ್ ಲಂಬೋದರ ಉತ್ತಮ ಮನರಂಜನೆಯ ಸಿನಿಮಾ ಎಂದು ಬಣ್ಣಿಸಿದರು.

Leave a Comment