ಕಾಮಿಡಿ ಕಿಲಾಡಿಗಳ ಕಲರವ

ಕಿರುತೆರೆಯಲ್ಲಿ ಜನರನ್ನು ನಕ್ಕು ನಗಿಸಿದ “ಕಾಮಿಡಿ ಕಿಲಾಡಿಗಳು” ಅಂತಿಮ ಹಂತಕ್ಕೆ ಬಂದಿದೆ. ೧೪ ಮಂದಿ ಕಾಮಿಡಿ ಕಿಲಾಡಿಗಳು ಜನರನ್ನು ನಕ್ಕು ನಗಿಸಿ ಈಗ ಗ್ರಾಂಡ್ ಫಿನಾಲೆ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಕಲೆಗೆ, ಕಲಾವಿದರಿಗೆ ಅದರಲ್ಲೂ ಹಾಸ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿರುವುದು ಉತ್ತರ ಕರ್ನಾಟಕ. ಕಿಲಾಡಿಗಳ ಕಲರವಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆಯ ಸಾವಿರಾರು ಮಂದಿ.

ಜನರನ್ನು ನಕ್ಕು ನಗಿಸಿದ ಕಾಮಿಡಿ ಕಿಲಾಡಿಗಳು ಅಮತಿಮ ಹಂತಕ್ಕೆ ಬಂದಿದ್ದಾರೆ. ಫೈನಲ್ಸ್‌ನಲ್ಲಿ ಇರುವವರಲ್ಲಿ ಯಾರಿಗೆ ಕಿರೀಟ ಮುಡಿಗೇರಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಹಿರಿಯ ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟಿ ರಕ್ಷಿತಾ ಅವರು ಅಳೆದು ತೂಗಿ ಅತ್ಯುತ್ತಮ ಕಿಲಾಡಿಗಳನ್ನು ಅಂತಿಮ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಆ ಮೂಲಕ ಹಾಸ್ಯದ ಮೂಲಕ ರಂಜನೆಯ ರಸದೌತಣ ನೀಡುವ ಮೂಲಕ ನಗುವಿನ ಕೊರೆತೆ ನೀಗಿಸಿದ್ದಾರೆ.
೫ ತಿಂಗಳ ಹಿಂದೆ ಕರ್ನಾಟಕದ ಬೆಸ್ಟ್ ಕಾಮಿಡಿ ಕಿಲಾಡಿಗಳನ್ನು ಹುಡುಕುವ ಕಾರ್ಯ ಆರಂಭವಾದ ಬಳಿಕ ಆರು ಮುಖ್ಯ ಜಿಲ್ಲೆಗಳಲ್ಲಿ ಸಾವಿರಾರು ಜನರ ಆಡಿಷನ್ ನಡೆಸಿ ಅದರಿಂದ ನಿರೀಕ್ಷಿಸಿದ್ದು ಕೇವಲ ಟಾಪ್ ಇಪ್ಪತ್ತು ಕಾಮಿಡಿ ಕಲಾವಿದರು ಮಾತ್ರ. ಆದರಲ್ಲಿ ಒಳ್ಳೆ ಕಾಮಿಡಿ ಮಾಡುವ ಕಲಾವಿದರು ಸಿಕ್ಕಿದ್ದು ಕೆವಲ ೧೪ ಮಂದಿ ಮಾತ್ರ. ೧೪ ಕಿಲಾಡಿಗಳೊಂದಿಗೆ ಶುರುವಾದ ಕಾರ್ಯಕ್ರಮ ಸತತವಾಗಿ ೧೭ ವಾರಗಳು ರಾಜ್ಯದಲ್ಲಿರುವ, ದೇಶದಲ್ಲಿರುವ ಮತ್ತು ವಿಶ್ವದ್ಯಾದಂತ ಇರುವ ಕನ್ನಡಿಗರನ್ನು ಪ್ರತೀ ಶನಿವಾರ ಮತ್ತು ಭಾನುವಾರ ಮನರಂಜಿಸಿದ್ದು ಕಾರ್ಯಕ್ರಮದ ಯಶಸ್ಸು.
ನಯನ, ದಿವ್ಯಶ್ರೀ, ಪ್ರವೀಣ, ಲೋಕೇಶ್, ಶಿವರಾಜ್.ಕೇ.ಆರ್. ಪೇಟೆ, ಸಂಜು ಬಸಯ್ಯ, ಹಿತೇಶ್, ಅನೀಶ್, ಗೋವಿಂದೆ ಗೌಡ ಮತ್ತು ಮುತ್ತುರಾಜ್ ಫಿನಾಲೆಗೆ ಆಯ್ಕೆಯಾಗಿ ಉತ್ತರ ಕರ್ನಾಟಕದ ಬಾಗಲಕೋಟೆಯ ಜಿಲ್ಲಾಕ್ರೀಡಂಗಣದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯ ಪೆರ್ಫಾರ್ಮೆನ್ಸ್‌ಗೆ ಅದ್ಧೂರಿಯಾದ ವೇದಿಕೆ ತಯಾರಾಗಿತ್ತು. ಇದೇ ಭಾನುವಾರ ಕಿಲಾಡಿ ಯಾರು ಎನ್ನುವುದು ಗೊತ್ತಾಗಲಿದೆ
ಇವುಗಳ ಮಧ್ಯೆ ನಿರೂಪಕ ಆನಂದ್‌ರವರ ಮಾತು ಮತ್ತು ಮನರಂಜನೆ. ಜೊತೆಗೆ ಡ್ರಾಮ ಜ್ಯೂನಿಯರ್ ತೀರ್ಪುಗಾರ ‘ ವಿಜಯ ರಾಘವೇಂದ್ರ ‘ಎರಡು ಕನಸು’ ಚಿತ್ರತಂಡದೊಂದಿಗೆ ವೇದಿಕೆಗೇರಿ ಮನರಂಜಿಸಿದರು. ಇವರ ಜೊತೆ ಡ್ರಾಮ ಜ್ಯೂನಿಯರ್ಸ್ ಸೂಪರ್ ಸ್ಟಾರ್‌ಗಳಾದ ಡ್ರಾಮ ಕಿಡ್ಸ್‌ಗಳು ‘ಜೋಡಿ ಹಕ್ಕಿ’ಯ ಜೋಡಿಯೊಂದಿಗೆ ವೇದಿಕೆ ಇನ್ನಷ್ಟು ಕಳೆ ಕಟ್ಟಿತು.
ಮೊದಲ ಬಹುಮಾನ ೫ಲಕ್ಷ ಮತ್ತು ಟ್ರೋಪಿ, ಎರಡನೇ ಬಹುಮಾನ ಮೂರು ಲಕ್ಷ ಹಾಗು ತೃತೀತ ಬಹುಮಾನ ೧ ಲಕ್ಷ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ. ಮನರಂಜನೆಯ ಕಾರ್ಯಕ್ರಮ ನೀಡಿದ ಜೀವಾಹಿನಿ ರಂಜನೆಯ ರಸದೌತಣ ನೀಡುವ ಮೂಲಕ ರಾಜ್ಯದ ಅತ್ಯುತ್ತಮ ಕಲಾವಿದರನ್ನು ಗುರುತಿಸಿ ಬೆಳೆಸಿದೆ.

Leave a Comment