ಕಾಫಿ ವಿತ್ ಕರಣ್ ಅತಿಥಿ ಜಸ್ಟಿನ್ ಬೀಬರ್

ಪ್ರೀತಿ, ಮದುವೆ ಕುರಿತ ಇತ್ಯಾದಿ ಗಾಸಿಪ್ ವಿಷಯಗಳನ್ನು ಕೆದಕುತ್ತಾ ಸೆಲೆಬ್ರಿಟಿಗಳ ಕಾಲು ಎಳೆಯುವ ಕರಣ್ ಜೋಹರ್ ರವರ ಮೋಸ್ಟ್ ಪಾಪ್ಯುಲರ್ ಶೋ ’ಕಾಫಿ ವಿತ್ ಕರಣ್’ ಆರನೇ ಆವೃತ್ತಿ ಸದ್ಯದಲ್ಲೇ ಶುರುವಾಗಲಿದೆ.
ಅಂದಹಾಗೆ ಸ್ಟಾರ್ ವರ್ಲ್ಡ್ ಇಂಡಿಯಾ ಮತ್ತು ಸ್ಟಾರ್ ಪ್ಲಸ್, ಸ್ಟಾರ್ ಒನ್ ವಾಹಿನಿಗಳಲ್ಲಿ ಪ್ರಸಾರವಾಗುವ ಈ ಫೇಮಸ್ ಟಾಕ್ ಶೋ’ದ ಪ್ರತಿ ಎಪಿಸೋಡ್ ಬಗ್ಗೆಯೂ ವೀಕ್ಷಕರಿಗೆ ಯಾವ ಸೆಲೆಬ್ರಿಟಿಗಳು ಟಾಕ್ ಶೋ ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿರುತ್ತದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈಗ ಸದ್ಯದಲ್ಲೇ ಶುರುವಾಗಲಿರುವ ’ಕಾಫಿ ವಿತ್ ಕರಣ್’ ಸೀಸನ್ ೬ ರ ಬಗ್ಗೆ ತಮ್ಮ ಹಿಂದಿನ ಸೀಸನ್ ಗಳಿಗಿಂತ ಅತ್ಯಧಿಕವಾದ ಕ್ರೇಜ್ ಹೆಚ್ಚಿಸಿದ್ದಾರೆ. ಕಾರಣ ’ಕಾಫಿ ವಿತ್ ಕರಣ್’ ಆರನೇ ಸೀಸನ್ ಮೊದಲ ಸಂಚಿಕೆಯಲ್ಲಿ ಅತಿಥಿಯಾಗಿ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ರವರ ’ಕಾಫಿ ವಿತ್ ಕರಣ್’ ಆರನೇ ಸೀಸನ್ ನ ಮೊದಲ ಎಪಿಸೋಡ್ ಗೆ ಗ್ರ್ಯಾಮ್ಮಿ ಪ್ರಶಸ್ತಿ ವಿಜೇತ ಗಾಯಕ ಜಸ್ಟಿನ್ ಬೀಬರ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ ’ಜಿಯೋ ಜಸ್ಟಿನ್ ಬೀಬರ್’ ಪ್ರವಾಸದ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕರಣ್ ಜೋಹರ್ ಸಹ ತಮ್ಮ ಟಾಕ್ ಶೋ ’ಕಾಫಿ ವಿತ್ ಕರಣ್’ ದಲ್ಲಿ ಸಂದರ್ಶನ ಕಾರ್ಯಕ್ರಮ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಆದರೆ ಜಸ್ಟಿನ್ ಬೀಬರ್ ಅವರೊಂದಿಗಿನ ’ಕಾಫಿ ವಿತ್ ಕರಣ್’ ಟಾಕ್ ಶೋ ಯಾವಾಗ ನಡೆಯಲಿದೆ, ಪ್ರಸಾರ ಯಾವಾಗ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ.
ಈ ಹಿಂದೆ ಕರಣ್ ಜೋಹರ್ ಅಂತರಾಷ್ಟ್ರೀಯ ಸೆಲೆಬ್ರಿಟಿಗಳಾದ ರಿಚರ್ಡ್ ಗೆರೆ, ಮಾರಿಯಾ ಶರ್ಪೋವಾ, ಮೆರಿಲ್ ಸ್ಟೀಪ್, ರಾಬರ್ಟ್ ದೆ ನಿರೊ, ಜಾರ್ಜ್ ಕ್ಲೂನೀ ಅವರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಸಮಾರಂಭಗಳಲ್ಲಿ ಚಾಟ್ ಶೋ ನಡೆಸಿದ್ದಾರೆ. ಜಸ್ಟಿನ್ ಬೀಬರ್ ಸಂಗೀತ ಮೇಳ ಜಸ್ಟಿನ್ ಬೀಬರ್ ಸಂಗೀತ ಮೇಳ ಜಸ್ಟಿನ್ ಬೀಬರ್ ರವರು ಮೇ ೧೦ ರಂದು ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು.
ಭಾರತದಲ್ಲಿ ಅಭಿಮಾನಿಗಳಿಗೆ ನಿರಾಸೆ ಮಾಡಿದ ಸ್ಟಾರ್
ಮೇ ೧೦ ರಂದು ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಹಬ್ಬ ಮಾಡಿದ್ದ ಖ್ಯಾತ ಪಾಪ್ ಗಾಯಕ ಜಸ್ಟೀನ್ ಬೀಬರ್ ಅಭಿಮಾನಿಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಮೇ ೯ರಂದು ರಾತ್ರಿ ೨ ಗಂಟೆಗೆ ಮುಂಬೈಗೆ ಬಂದ ಬೀಬರ್ ಮೇ ೧೦ರಂದು ಬೆಳಿಗ್ಗೆ ಮುಂಬೈ ಸುತ್ತಿದ್ದಾರೆ. ಈ ವೇಳೆ ಮಾಲ್ ವೊಂದರಲ್ಲಿ ಅಭಿಮಾನಿಗಳಿಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎನ್ನಲಾಗಿದೆ.

ಮಾಲ್ ನಲ್ಲಿ ಬೀಬರ್ ಕಾಣ್ತಾ ಇದ್ದಂತೆ ಅಭಿಮಾನಿಗಳು ಫೋಟೋ ತೆಗೆಯಲು ಮುಗಿ ಬಿದ್ದಿದ್ದಾರೆ. ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಯ ಕೈನಲ್ಲಿದ್ದ ಮೊಬೈಲ್ ನೋಡಿ ಬೈದಿದ್ದಲ್ಲದೆ ‘ತಿhಚಿಣ ಣhe ಜಿ*** ಎಂದಿದ್ದಾರೆ ಬೀಬರ್. ಇದಕ್ಕೂ ಮೊದಲು ಸ್ಕೂಲ್ ಬಸ್ ನಲ್ಲಿದ್ದ ಕೊಳಗೇರಿ ಮಕ್ಕಳನ್ನು ಭೇಟಿಯಾಗಿದ್ದರು ಬೀಬರ್. ಇದನ್ನು ನೋಡಿ ಬೀಬರ್ ಎಷ್ಟು ಫ್ರೆಂಡ್ಲಿ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೆ ಮಾಲ್ ನಲ್ಲಿ ಬೀಬರ್ ನಡೆದುಕೊಂಡ ರೀತಿ ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿತ್ತು. ನಿಗದಿಯಂತೆ ಬೀಬರ್ ಮುಂಬೈ ನಂತ್ರ ದೆಹಲಿ,ಆಗ್ರಾಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದ್ರೆ ಎಲ್ಲ ಪ್ರವಾಸ ರದ್ದು ಮಾಡಿ ಬೀಬರ್ ತವರಿಗೆ ವಾಪಸ್ ಆಗಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ. ಇದಕ್ಕೆ ಭಾರತದ ಬಿಸಿಲು ಕಾರಣ ಎನ್ನಲಾಗ್ತಾ ಇದೆ. ಈ ಮಧ್ಯೆ ಅವರು ಯಾವಾಗ ಕಾಫಿ ವಿತ್ ಕರಣ್ ಅತಿಥಿಯಾಗಿ ಭಾಗವಹಿಸಿ ಸಂದರ್ಶನ ನೀಡಿದ್ದಾರೆ ಎಂಬುದು ತಿಳಿದಿಲ್ಲ.

ಅಂದು ಜನಪ್ರಿಯ ಪಾಪ್ ಗಾಯಕ ಜಸ್ಟಿಬ್ ಬೀಬರ್ ಆಗಮನಕ್ಕಾಗಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಕಾದಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ನಿನ್ನೆ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾನ್ಸರ್ಟ್ ಗೆ ಬಂದಿದ್ರು. ಜಸ್ಟಿನ್ ಬೀಬರ್ ಹಾಡಿಗೆ ಕಿವಿಯಾಗಬೇಕು ಅನ್ನೋದಷ್ಟೆ ಅಭಿಮಾನಿಗಳ ಉದ್ದೇಶ. ಆದ್ರೆ ಯುವ ಗಾಯಕ ಮಾತ್ರ ಅಭಿಮಾನಿಗಳನ್ನು ಒಂದು ರೀತಿಯಲ್ಲಿ ವಂಚಿಸಿದ್ದಾರೆ. ಅಲ್ಲಿ ನೆರೆದಿದ್ದ ಜನರು, ಆಯೋಜಕರು ಮತ್ತು ಮಾಧ್ಯಮದವರನ್ನೆಲ್ಲ ಮೂರ್ಖರನ್ನಾಗಿ ಮಾಡಿದ್ದಾರೆ. ಅಸಲಿಗೆ ಕಾನ್ಸರ್ಟ್ ನಲ್ಲಿ ಜಸ್ಟಿನ್ ೨೧ ಹಾಡುಗಳನ್ನು ಹಾಡಬೇಕಿತ್ತು. ಆದ್ರೆ ಆತ ಹಾಡಿದ್ದು ಕೇವಲ ನಾಲ್ಕು ಹಾಡುಗಳನ್ನು ಮಾತ್ರ. ಉಳಿದ ಹಾಡುಗಳನ್ನೆಲ್ಲ ಹಿನ್ನೆಲೆಯಲ್ಲಿ ಪ್ರಸಾರ ಮಾಡಲಾಗಿದೆ. ತಾನೇ ಹಾಡಿದಂತೆ ಜಸ್ಟಿನ್ ನಾಟಕವಾಡಿದ್ದಾರೆ, ಕೇವಲ ಲಿಪ್ ಸಿಂಕ್ ಮಾಡಿದ್ದಾರೆ. ಕಾನ್ಸರ್ಟ್ ನಂತರ ಜಸ್ಟಿನ್ ಎಲ್ಲರನ್ನೂ ಫೂಲ್ ಮಾಡಿರೋ ವಿಷಯ ಬೆಳಕಿಗೆ ಬಂದು ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು.

Leave a Comment