ಕಾಫಿ ಡೇ ಸಿದ್ದಾರ್ಥ ತಂದೆ ವಿಧಿ ವಶ

ಮೈಸೂರು.ಆ.೨೫:ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ಇಂದು ಬೆಳಗ್ಗೆ ವಿಧಿಶರಾಗಿದ್ದಾರೆ.
ಗಂಗಯ್ಯ ಹೆಗ್ಡೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಿದ್ಧಾರ್ಥ್ ಜುಲೈ ೨೯ರಂದು ಸಾವನ್ನಪ್ಪಿದ್ದರು. ವಿ.ಜಿ. ಸಿದ್ಧಾರ್ಥ ಸಾವನ್ನಪ್ಪುವ ಮೊದಲೇ ಗಂಗಯ್ಯ ಹೆಗ್ಡೆ ಕೋಮಾಕ್ಕೆ ಜಾರಿದ್ದರು. ಆದ್ದರಿಂದ, ಕೊನೆಯ ತನಕ ಪುತ್ರನ ಸಾವಿನ ವಿಚಾರ ಅವರಿಗೆ ತಿಳಿಯಲೇ ಇಲ್ಲ. ವಿ.ಜಿ.ಸಿದ್ಧಾರ್ಥ ಪತ್ರದ ಬಗ್ಗೆ ಸಿಸಿಬಿಯಿಂದ ತನಿಖೆ ವಿ.ಜಿ. ಸಿದ್ಧಾರ್ಥ ಮಂಗಳೂರಿಗೆ ತೆರಳುವ ಮುನ್ನ ಮೈಸೂರಿಗೆ ಭೇಟಿ ನೀಡಿದ್ದರು.
ಆಸ್ಪತ್ರೆಯಲ್ಲಿ ತಂದೆಯ ಆರೋಗ್ಯ ವಿಚಾರಿಸಿದ್ದರು. ತಂದೆಯ ಜೊತೆ ವಿ.ಜಿ. ಸಿದ್ಧಾರ್ಥ ಕುಳಿತಿರುವ ಚಿತ್ರ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿತ್ತು. ಸಿದ್ಧಾರ್ಥ ಮೇಲಿದ್ದ ೯೪೦೯ ಕೋಟಿ ಸಾಲದ ಪೂರ್ಣ ಅಂಕಿ-ಅಂಶ ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ಮೂಲತಃ ಕೃಷಿಕರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ಚೇತನಹಳ್ಳಿಯಲ್ಲಿ ತೋಟ ಬೆಳೆಸಿದರು ಅವರೇ. ಮಗನ ಉದ್ಯಮಕ್ಕೆ ಬೆಂಬಲವಾಗಿ ನಿಂತವರು ಗಂಗಯ್ಯ ಹೆಗ್ಡೆ. ಊರಿನವವರು ಪ್ರೀತಿಯಿಂದ ಗಂಗಯ್ಯ ಹೆಗ್ಡೆ ಅವರನ್ನು ಅಯ್ಯ ಎಂದು ಕರೆಯುತ್ತಿತ್ತು. ೪ ವರ್ಷಗಳ ಹಿಂದೆ ಗಂಗಯ್ಯ ಹೆಗ್ಡೆ ೯೦ ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ ’ಚೇತನ’ ಎಂಬ ಪುಸ್ತಕವನ್ನು ಹೊರತರಲಾಗಿತ್ತು. ಎಸ್. ಎಂ. ಕೃಷ್ಣ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.

Leave a Comment