ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯಸರ್ಕಾರ ವಿಫಲ-ಎಬಿವಿಪಿ ಪ್ರತಿಭಟನೆ

ದಾವಣಗೆರೆ, ಏ. 21 – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ನಗರದ ಜಯದೇವ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆಗಳಾಗುತ್ತಿವೆ. ಆದರು ರಾಜ್ಯ ಸರ್ಕಾರ ತಲೆ ಕೆಡೆಸಿಕೊಳ್ಳುತ್ತಿಲ್ಲ.ಉಡುಪಿ ಜಿಲ್ಲಾಧಿಕಾರಿಗಳ ಮೇಲೆ ಮರಳು ಮಾಫಿಯಾದಿಂದ ಕೊಲೆ ಯತ್ನ ನಡೆದರು ಯಾವುದೇ ಕಾನೂನು ರೀತಿ ಕ್ರಮ ತೆಗೆದುಕೊಂಡಿಲ್ಲ. ಮಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ದಾಳಿಯಾಗಿದೆ. ದಾವಣಗೆರೆಯಲ್ಲಿ ಎಸಿ ಮತ್ತು ತಹಶೀಲ್ದಾರ್ ಮೇಲೆ ಅಕ್ಕಿ ಮಾಫಿಯಾ ಕೊಲೆ ಯತ್ನ ನಡೆದರು ಯಾವುದೇ ರೀತಿ ಸೂಕ್ತ ಕ್ರಮ ತೆಗೆದುಕೊಂಡಿಲ್ಲ.

ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಗಳು, ಕೆಲಸ ಮಾಡುವ ವಾತಾವರಣ ಇಲ್ಲವಾಗಿದೆ. ಇಂತಹ ಪ್ರಕರಣದಿಂದ ಅಧಿಕಾರಿಗಳ ನೈತಿಕ ಬಲ ಕುಸಿಯಲಿದೆ. ಹೀಗಾಗಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಅಧಿಕಾರಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದ ಎಬಿವಿಪಿ ಕಾರ್ಯಕರ್ತರು ರಾಜ್ಯದಲ್ಲಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ, ಹಲ್ಲೆ ಭಾಗ್ಯ, ಕೊಲೆ ಯತ್ನದ ಭಾಗ್ಯಗಳನ್ನು ನಡೆಯದಂತೆ ನೈತಿಕವಾಗಿ ಶಕ್ತಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ರಾಜಕೀಯ ಪ್ರಭಾವವನ್ನು ಬೀರಲು ಅವಕಾಶ ನೀಡಬಾರದು. ಯಾವುದೇ ಒಂದು ಸಂಘಟನೆಗೆ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರು .ಯಾವುದೇ ಒಂದು ಸಂಘಟನೆಗಳ ಹಿತಾಸಕ್ತಿಗಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕೆಂದು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಅನಿಲ್ ಕುಮಾರ್, ನಗರ ಸಹ ಕಾರ್ಯದರ್ಶಿ ಪ್ರಶಾಂತ್ ಬಿ.ಎಸ್, ವಿನಯ್ ಹೆಚ್, ವೀರೇಶ್, ರಾಮು, ವಿವೇಕ್, ರೋಜಾ, ಭಾರತಿ, ಯತೀಶ್ ಸೇರಿದಂತೆ ಇತರರಿದ್ದರು,

Leave a Comment