ಕಾಣದ ಕಿನಾರೆಗೆ ಹಂಬಲಿಸಿದೆ ಮನ

ಕಡಲ ತೀರದ ಸುಂದರ ಹಸಿರು ಪರಿಸರ ನಡುವೆ ಮುಖವೂ ತೋರಿಸದೆ ಓಡುವ ಹುಡುಗರು ಮತ್ತು ಹುಡುಗಿ ಸಿನೆಮಾ ಕಥೆಯೊಳಗೆ ಕರೆದೊಯ್ಯುತ್ತಿದ್ದಾರೆ ಎಂದೆನಿಸಿ ಆಕರ್ಷಿಸುತ್ತದೆ ಇತ್ತೀಚೆಗೆ ಬಿಡುಗಡೆಯಾದ ಕಿನಾರೆ ಚಿತ್ರದ ಟೀಜರ್.
ನಿರ್ದೇಶಕ ದೇವರಾಜ್ ಪೂಜಾರಿ ಒಂದು ವರ್ಷದಿಂದ ಚಿತ್ರವನ್ನು ಒಂದು ಕ

ಲಾಕೃತಿಯಂತೆ ಸೃಷ್ಟಿಸುತ್ತಿದ್ದಾರೆ. ಅವರ ಕಥೆಯಲ್ಲಿ ಕಡಲ ತಡಿಯ ಸುಂದರ ತಾಣಗಳೇ ಒಂದು ಪಾತ್ರವಾಗಿವೆ ಅಥವಾ ಆ ತಾಣಗಳನ್ನು ಇಟ್ಟುಕೊಂಡು ಪಾತ್ರಗಳನ್ನು ಸೃಷ್ಟಿಸಿ ಮುಗ್ಧ ಪ್ರೇಮ ಕಥೆಯನ್ನು ಹೆಣೆದಿದ್ದಾರೆ. ಹಾಗಂತ ಅವರು ಸ್ಪಷ್ಟವಾಗಿ ಹೇಳುವುದಿಲ್ಲ ಕಥೆ ಮತ್ತು ಪಾತ್ರಗಳು ಗೊತ್ತಾಗಬಾರದೆನ್ನುವ ನಿಲುವಿರುವುದರಿಂದ ಆ ಬಗ್ಗೆ ಆರಂಭದಿಂದಲೂ ಕುತೂಹಲ ಮೂಡಿಸುತ್ತಲೇ ಬಂದಿದ್ದಾರೆ. ಆದರೆ ಈಗ ಕಿನಾರೆಯ ಕಾಲ್ಪನಿಕ ಕಥೆಗೆ ನೈಜತೆಯನ್ನು ರೂಪವನ್ನು ಕೊಡಲಾಗಿದೆ.

ನನ್ನ ಕನಸನ್ನು ಪರದೆಗೆ ತರಲು ಪ್ರಯತ್ನಿಸಿದ್ದೇನೆ ಚಿತ್ರ ಶೇ. ೭೦ರಷ್ಟು ಪೂರ್ಣಗೊಂಡಿದೆ ಎಂದಿದ್ದಾರೆ. ಮೊದಲ ಬಾರಿಗೆ ನಾಯಕರಾಗುತ್ತಿರುವ ಸತೀಶ್ ಕೂಡ ತಮ್ಮದು ಯಾವ ಪಾತ್ರವೆನ್ನುವ ಗುಟ್ಟುಬಿಟ್ಟುಕೊಡಲಿಲ್ಲ. ಮೂಲತಃ ಮುಳಬಾಗಿಲಿನವರಾಗಿರುವ ಅವರು ಪಾತ್ರ ಚಾಲೇಂಜಿಂಗ್ ಆಗಿರುವುದರಿಂದ ನಿನಾಸಂನಲ್ಲಿ ನಟನೆಯಲ್ಲಿ ಆರು ತಿಂಗಳು ತರಬೇತಿ ಪಡೆದಿದ್ದಾರಂತೆ.

ನಾಯಕಿ ಗೌತಮಿ ತಮ್ಮದು ವಿಶೇಷ ಚಾಲೇಂಜಿಂಗ್ ಪಾತ್ರ ಕಾಲೇಜು ಅಥವಾ ಕೆಲಸ ಮಾಡುವ ಹುಡುಗಿ ಅಂತ ಹೇಳಲು ಸಾಧ್ಯವಿಲ್ಲ. ಇದೊಂದು ಸುಂದರ ಹೃದಯಗಳ ಕಥೆಯಾಗಿದ್ದು ನಿರ್ದೇಶಕರ ಕನಸಿಗೆ ಅರ್ಥ ತರುವ ಕೆಲಸ ಮಾಡಿದ್ದೇವೆ ಎಂದು ಪಾತ್ರಕ್ಕೆ ಇರಬಹುದಾದ ಭಾವುಕತೆಯಲ್ಲೇ ಹೇಳಿಕೊಂಡರು. ಸಂಗೀತ ನಿರ್ದೇಶಕ ಸುರೇಂದ್ರನಾಥ್ ಚಿತ್ರದ ಹಾಡುಗಳು ಮತ್ತು ಥೀಮ್ ಮ್ಯೂಸಿಕ್ ಕಥೆಯನ್ನು ಹೇಳುತ್ತ ಹೋಗುತ್ತವೆ.

ಇದು ಚಿತ್ರದ ಟೀಜರ್‌ನಲ್ಲಿ ಬಿಂಬಿತವಾಗಿದೆ ಎಂದು ತಿಳಿಸಿದರು. ಖಳನಟ ರವಿಶಂಕರ್ ಅವರಿಂದ ಮಾಡಿಸಬೇಕೆಂದಿದ್ದ ಪಾತ್ರವನ್ನು ದಿನೇಶ್ ಮಂಗಳೂರು ಅವರಿಂದ ಮಾಡಿಸಿದ್ದು ಅವರು ಈ ಚಿತ್ರದಿಂದ ರವಿಶಂಕರ್ ಹಾಗೆ ಪೂರ್ಣಪ್ರಮಾಣದ ಖಳನಟರಾಗಿ ಹೊರಹೊಮ್ಮುತ್ತಾರೆ ಎಂದು ದೇವರಾಜ್ ಪೂಜಾರಿ ಭವಿಷ್ಯ ನುಡಿದಿದ್ದಾರೆ.

Leave a Comment