ಕಾಡಿನ ಸರ್ವನಾಶದಿಂದ ಮಳೆಯ ಅಭಾವ ಎದುರಾಗಿದೆ

ಶಿವಮೊಗ್ಗ:ಜ,12; ಕಾಡಿನ ಸರ್ವನಾಶದಿಂದ ಇಂದು ಜನ ಮಳೆಯ ಅಭಾವ ಎದುರಿಸುತ್ತಿದ್ದಾರೆ. ಕಾಡಿನ ನಾಶಕ್ಕೆ ಅರಣ್ಯದ ಮರ ಗಿಡ ಪೆÇದೆಗಳನ್ನ ಕಡೆಯೋದರಿಂದ ಒಂದಡೆ ನಾಶವಾಗುತ್ತಾ ಹೋದರೆ ಕಾಡ್ಗಿಚ್ಚು ವಿನಿಂದ ನಾಶಿಸುತ್ತಿದೆ.
ಈ ಸಮಯ ಅಂದರೆ ಜನವರಿಯಿಂದ ಮೇ ತಿಂಗಳ ಕೊನೆಯ ತನಕ ಕಾಡಿನ ಮರಗಳ ಎಲೆ, ಟೊಂಗೆಗಳು ಒಣಗಿ ಬಿದ್ದಿರುವುದರಿಂದ ಒಣಗಿದ ಮರ ಮತ್ತು ಪೆÇದೆಗಳ ಘರ್ಷಣೆ ಯಿಂದ ಅಭಯಾರಣ್ಯಕ್ಕೆ ಬೆಂಕಿ ಬೀಳುವುದು ಸರ್ವೇ ಸಾಮಾನ್ಯ ಆದರೆ ನೈಸರ್ಗಿಕವಾಗಿ ಬೀಳುವ ಕಾಡ್ಗಿಚ್ಚು ಮತ್ತೆ ಅರಣ್ಯ ಹುಟ್ಟುವಿಗೆ ಕಾರಣವಾಗುತ್ತದೆ. ಆದರೆ ಮನುಷ್ಯನ ಲಜ್ಜತನ, ಹುಚ್ಚುತನದಿಂದ ಕಾಡ್ಗಿಚ್ಚು ಬೀಳುವ ಪ್ರಕ್ರಿಯೆ ಅತ್ಯಂತ ಹೇಯ ಕೃತ್ಯ. ಈ ಕೃತ್ಯದ ಬಗ್ಗೆ ಅರಣ್ಯ ಇಲಾಖೆ ಜ.10ರಂದು ಶಿವಮೊಗ್ಗ ತಾಲೂಕಿನ ಶೆಟ್ಟಿ ಅಭಯಾರಣ್ಯ ಮತ್ತು ಚಿತ್ರ ಹಳ್ಳಿ ಅಭಯಾರಣ್ಯದಲ್ಲಿ ಕಾಡ್ಗಿಚ್ಚಿನ ಕುರಿತು ಇಲ್ಲಿ ವಾಸಿಸುವ ಸಾರ್ವಜನಿಕರನ್ನ ಬಳಸಿಕೊಂಡು ಕಾಡ್ಗಿಚ್ಚಿನ ಕುರಿತು ಅಭಿಯಾನ ಮೂಡಿಸಿತು.
*ಶೆಟ್ಟಿ ಹಳ್ಳಿ ಮತ್ತು ಚಿತ್ರಹಳ್ಳಿ ಅಭಯಾರಣ್ಯ ಪ್ರದೇಶದ ಹಿನ್ನಲೆ:- ಎಲ್ಲಿಂದ ಎಲ್ಲಿ ನೋಡಿದರೂ ಮರ ಗಿಡ ಪೆÇದೆ ಬಳ್ಳಿ ಇರುವ ಈ ಅಭಯಾರಣ್ಯ ಪ್ರದೇಶದಲ್ಲಿ 60 ವರ್ಷಗಳ ಹಿಂದೆ ಪ್ರಾರಂಭವಾದ ಶರಾವತಿ ಡ್ಯಾಂಗಳ ಹಿನ್ನೀರಿನ ಹಿನ್ನಲೆಯಲ್ಲಿ ನಿರಾಶ್ರಿತಗೊಂಡ ಶರಾವತಿ ಹಿನ್ನೀರು ಪ್ರದೇಶದ ಸಂತ್ರಸ್ಥರು ಶಿವಮೊಗ್ಗದ ಅನೇಕ ಕಡೆ ಬಂದು ನೆಲೆಸಿದರು. ಅಲ್ಲಿಂದ ಸಂತ್ರಸ್ಥರಾದ ಕೆಲವು ಕುಟುಂಬ ಈ ಅಭಯಾರಣ್ಯಕ್ಕೆ ಬಂದು ನೆಲೆಸಿದರು.
ಅಲ್ಲಿಂದ ಬಂದು ಇಲ್ಲಿ ನೆಲೆಸಿದ ನಾಗರೀಕರು ಕೃಷಿಯನ್ನೆ ಅವಲಂಭಿಸಿ ಪ್ರಾರಂಭಿಸಿದ ಈ ಜನರು ಕ್ರಮೇಣ ಗುಡಿಸಲಿಂದ ಮಂಗಳೂರು ಹಂಚು ಮನೆಗೆ ಬದಲಾದರು. ಕಳೆದ ಇಪ್ಪತ್ತೈದು ವರ್ಷದ ಹಿಂದೆ ಈ ಭಾಗವನ್ನ ಕರ್ನಾಟಕ ಸರ್ಕಾರ ಚಿತ್ರಹಳ್ಳಿ ಮತ್ತು ಶೆಟ್ಟಿ ಅಭಯಾರಣ್ಯ ಪ್ರದೇಶವೆಂದು ಘೋಷಿಸುತು. ಇದರಿಂದಾಗಿ ಇಲ್ಲಿನ ಜನ ನಗರದ ಸೌಕರ್ಯಗಳನ್ನ ಈ ಅಭಯಾರಣ್ಯ ಪ್ರದೇಶದ ಸೌಕರ್ಯ ನೋಡಲು ಸಾದ್ಯವಾಗಲಿಲ್ಲ. ಇಲ್ಲಿ ಡಾಂಬರ್ ರಸ್ತೆ, ವಿದ್ಯತ್ ಸಂಪರ್ಕ, ಅಧಿಕ ಓಡಾಟ ದ ದಟ್ಟಣೆ, ಮರ ಕಡಿಯೋದು, ಅಭಿವೃದ್ದಿ ಕೆಲಸಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಯಿತು.
ಇದರಿಂದ ಬೇಸತ್ತ ಇಲ್ಲಿನ ಜನ ಈ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಅವಾಗ ಅವಾಗ ಜಗಳಕ್ಕೆ ನಿಲ್ಲುವುದುಂಟು. ಈ ಜಗಳದ ಪರಿಣಾಮವಾಗಿ ಇದೇ ಜನ ನೈಸರ್ಗಿಕವಾಗಿ ಕಾಡ್ಗಿಚ್ಚು ಸಂಭವಿಸುವುದಕ್ಕಿಂತ ಇದೇ ಜನ ಕಾಡ್ಗಿಚ್ಚಿನ್ನ ಹಚ್ಚಿ ಅರಣ್ಯ ಇಲಾಖೆಯವರೊಂದಿಗೆ ಸಿಟ್ಟನ್ನ ತೀರಿಸಿಕೊಳ್ಳುತ್ತಿದ್ದರು.
ಈ ಭಾಗದ ಜನಕ್ಕೆ ವಿದ್ಯುತ್ ಸಂಪರ್ಕವಿಲ್ಲ, ರಸ್ತೆ ಇದ್ದರೂ ಡಾಂಬರೀಕರಣಗೊಂಡಿಲ್ಲ. ಹಾಗೂ ಹಳೆ ಕಾಲದ ಶಾಲೆಯ ಕಟ್ಟಡಗಳಲ್ಲಿ ಇವರ ಮಕ್ಕಳು ಓದುವುದರಿಂದ ಈ ಜನ ನಗರೀಕರಣದ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ.
ಆದರೆ ಈಗ ಅರಣ್ಯ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ಅರಣ್ಯ ವಾಸಿಗಳ ಕೆಲವು ಬೇಡಿಕೆಗಳಲ್ಲಿ ಒಂದು ಬೇಡಿಕೆ ಈಡೇರಿಸಿಕೊಡುವುದಾಗಿ ಭರವಸೆ ನೀಡಿರುವುದರಿಂದ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವುದಾಗಿ ಜನರು ಮುಂದಾಗಿದ್ದಾರೆ. ವಿದ್ಯತ್ ಚ್ಛಕ್ತಿ ಸಂಪರ್ಕ ನೀಡಲು ಅರಣ್ಯ ಇಲಾಖೆ ಒಪ್ಪಿರುವುದರಿಂದ ಇಲ್ಲಿನ ಜನ ಕಾಡ್ಗಿಚ್ಚು ಹಚ್ಚದಂತೆ ಅರಣ್ಯ ಇಲಾಖೆಯ ಅಭಿಯಾನಕ್ಕೆ ಜನ ಸಹಕರಿಸಲು ಮುಂದಾಗಿದೆ.
ಹೊರಗಡೆಯಿಂದ ಬರುವ ಅತಿಥಿಗಳಿಗೆ ಬೀಡಿ ಸಿಗರೇಟು ಸೇದಂತೆ, ಹುಡುಗಾಟಿಕೆಗೆ ಒಣಗಿದ ಎಲೆ ಪೆÇದೆಗಳಿಗೆ ಬೆಂಕಿ ಹಚ್ಚಬಾರದು ಎಂದು ಈ ಅಭಯಾರಣ್ಯಗಳಿಗೆ ಭೇಟಿ ನೀಡುವ ಜನರಿಗೆ ತಿಳುವಳಿಕೆ ಮಾಡಲಾಗುವುದಾಗಿ ಶೆಟ್ಟಿಹಳ್ಳಿ ಗ್ರಾಪಂ ಸದಸ್ಯ ಪತ್ರಿಕೆಗೆ ತಿಳಿಸುತ್ತಾರೆ.
ಐದನೇ ತರಗತಿಯ ವಿದ್ಯಾರ್ಥಿಯಾದ ಮಣಿಕಂಠ ಮಾತನಾಡಿ ಕಾಡಿನಲ್ಲಿ ಬೆಂಕಿ ಹತ್ತಿಕೊಂಡರೆ ಮರದ ದೊಡ್ಡ ಎಲೆಗಳ ಎಕ್ಕೆಗಳಿಂದ ಬಡಿದು ಆರಿಸುವುದಾಗಿ ತಿಳಿಸುತ್ತಾನೆ.
ಎಸಿಎಫ್ ಮುಕುಲ್ ಚಂದ್ರ ಮಾತನಾಡಿ ಸ್ಥಳೀಯರು ಕಾಡ್ಗಿಚ್ಚು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇವರ ಸಹಾಯದಿಂದ ನಾವು 39.650ಎಕರೆಯ ಈ ಅಭಯಾರಣ್ಯ ಪ್ರದೇಶದಲ್ಲಿ ಎಲ್ಲಿ ಕಾಡ್ಗಿಚ್ಚು ಬಿದ್ದಿದೆ ಎಂಬುದನ್ನ ತಿಳಿಯಲು ಸ್ಥಳೀಯರು ನಮಗೆ ಸುದ್ದಿಯ ಮೂಲವೇ ಆಗಿರುವುದರಿಂದ ಇವರಲ್ಲಿ ಕಾಡ್ಗಿಚ್ಚಿನ ಬಗ್ಗೆ ಅರಿವು ಮುಖ್ಯವಾಗಿದೆ ಎಂದರು.
ಕಾಡ್ಗಿಚ್ಚು ತಡೆಯಲು ಫೈರ್ ಲೈನ್, ಫೈರ್ ವಾಚ್ ಟವರ್, ವೈರ್ ಲೆಸ್ ಮೂಲಕ ಕ್ರಮ ಕೈಗೊಳ್ಳಲಾಗುವುದು ನಮ್ಮ ಉನ್ನತ ಅಧಿಕಾರಿಗಳ ಬಳಿಯಿರುವ ಫೈರ್ ಡಿಟೆಕ್ಷನ್ ಬಳಸಿ ಕಾಡ್ಗಿಚ್ಚು ಎಲ್ಲಿ ಸಂಭವಿಸುವುದೋ ಅಲ್ಲಿ ಕ್ರಮ ಜರುಗುಸುತ್ತೇವೆ ಎಂದರು.
ಫೈರ್ ಲೈನ್ ಅಂದರೆ ಸೀಮಿತ ಗಡಿಗಳನ್ನ ಗುರುತಿಸಿ ಅಲ್ಲಿ ಮರಗಳಗಳನ್ನ ಸಣ್ಣದಾಗಿ ಗಡಿಯುದ್ದಕ್ಕೂ ಕತ್ತರಿಸಲಾಗುವುದು ಕಾಡ್ಗಿಚ್ಚು ಗಾಳಿಯಿಂದ ಕಿಲೋಮೀಟರ್ ವರೆಗೆ ಹರಡಲಿದೆ. ಈ ರೀತಿ ಫರ್ ಲೈನ್ ಕಾಡ್ಗಚ್ಚನ್ನ ಕಡಿಮೆ ಗೊಳಿಸಲಿದೆ ಎಂದರು.
ಗ್ರಾಮಸ್ಥ ಈಶ್ವರಪ್ಪ ಮಾತನಾಡಿ ಕಾಡಿಗೆ ಬೆಂಕಿ ಹಚ್ಚೋದು ಮನುಷ್ಯರೇ ಹೆಚ್ಚು. ಗ್ರಾಮಸ್ಥರು ಇದರಲ್ಲಿ ಭಾಗಿಯಾಗಿದ್ದಾರೆ. ಕೆಲವು ಅವ್ಯವಸ್ಥೆಯಿಂದ ಇಲಾಖೆ ವಿರುದ್ದ ಇಲ್ಲಿನ ಗ್ರಾಮಸ್ಥರು ಇಲಾಖೆ ವಿರುದ್ದ ಇದ್ದು ಬೆಂಕಿ ಹಚ್ಚಲು ಅವರೂ ಕಾರಣವಾಗಿದ್ದರು. ಆದರೆ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಅರಣ್ಯ ಇಲಾಖೆ ಒಪ್ಪಿದ್ದರಿಂದ ಈ ಬಾರಿ ಗ್ರಾಮಸ್ಥರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

Leave a Comment