ಕಾಡಾನೆ ದಾಳಿ

ಸುಳ್ಯ ಕೃಷಿಕರ ತೀರದ ಬವಣೆ
ಮಂಗಳೂರು, ಏ.೧೬- ಸುಳ್ಯ ತಾಲೂಕಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು ಕೃಷಿಕರು ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಕಳೆದೊಂದು ತಿಂಗಳಿಂದ ತಾಲೂಕಿನ ವಿವಿಧೆಡೆ ಕಾಡಾನೆ ಹಿಂಡು ಹಿಂಡಾಗಿ ದಾಳಿ ನಡೆಸುತ್ತಿದ್ದು ಕೋಟ್ಯಂತರ ರೂ. ಮೌಲ್ಯದ ತೋಟ, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ದೂರಿದ್ದಾರೆ.
ನಿನ್ನೆ ಅಲೆಟ್ಟಿ ಗ್ರಾಮದ ಕಳಗಿಬೈಲ್ ಪರಿಸರದ ರೈತರ ತೋಟಕ್ಕೆ ದಾಳಿ ನಡೆಸಿರುವ ಕಾಡಾನೆ ಹಿಂಡು ದಾಂಧಲೆ ನಡೆಸಿದೆ. ಕೃಪಾಶಂಕರ್, ಲೋಲಜಾಕ್ಷ, ಅಚ್ಯುತ ಮಾಸ್ತರ್, ಯಶೋಧರ, ಚಿದಾನಂದ ಎಂಬವರಿಗೆ ಸೇರಿದ ಬಾಳೆತೋಟ, ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಗಿಡಗಳನ್ನು ತುಂಡರಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Leave a Comment