ಕಾಡಾನೆ ದಾಳಿ – ರೈತರಲ್ಲಿ ಆತಂಕ

ಮುಂಡಗೋಡ,ಅ.23- ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಿಂಡು ಗದ್ದೆಗಳ ಮೇಲೆ ದಾಳಿ ನಡೆಸುತ್ತಿದ್ದು ಇದರಿಂದ ರೈತರು ಆತಂಕಗೊಂಡಿದ್ದಾರೆ.
ಕಳೆದ ರಾತ್ರಿ ತಾಲೂಕಿನ ಕರವಳ್ಳಿ ಬಳಿ ಮಾರುತಿ ಕಂಚಿಕೊಪ್ಪ ಎಂಬುವರ 4 ಏಕರೆ ಭತ್ತದ ಗದ್ದೆ, ರಾಮಣ್ಣ ಕಂಚಿಕೊಪ್ಪ ಎಂಬುವರ 4 ಏಕರೆ ಭತ್ತದ ಗದ್ದೆ, ತಿಪ್ಪಣ್ಣ ಎಂಬುವರ 4 ಏಕರೆ ಭತ್ತದ ಗದ್ದೆ ಹಾಗೂ ಚವಡಳ್ಳಿಯಲ್ಲಿ ಹಸನಸಾಬ ನದಾಫ ಎಂಬುವರ 2 ಏಕರೆ ಕಬ್ಬಿನ ಗದ್ದೆ, ಮೌಲಾಲಿ ನದಾಫ ಎಂಬುವರ 2 ಏಕರೆ ಭತ್ತದ ಗದ್ದೆ, ಚನ್ನಪ್ಪ ಜೋತಪ್ಪನವರ್ ಎಂಬುವರ 4 ಏಕರೆ ಭತ್ತ, ನಿಂಗಪ್ಪ ಭದ್ರಾಪುರ ಎಂಬುವರ 4ಏಕರೆ ಭತ್ತ ಮತ್ತು ಬಸವರಾಜ ಭದ್ರಾಪುರ ಎಂಬುವರ 4 ಏಕರೆ ಭತ್ತದ ಗದ್ದೆಗಳನ್ನು 6 ಕಾಡಾನೆಗಳ ಹಿಂಡು ತಿಂದು ತುಳಿದು ಹಾನಿ ಮಾಡಿದೆ. ಫಕ್ಕೀರಪ್ಪ ತಳವಾರ ಎಂಬುವರ ಒಂದುವರೇ ಏಕರೆ ಶುಂಠಿ ಬೆಳೆಯನ್ನು ಕಾಡಾನೆಗಳ ಹಿಂಡು ಹಾನಿ ಮಾಡಿದೆ.
ತಾಲೂಕಿಗೆ ಆಗಮಿಸಿರುವ 18 ಕಾಡಾನೆಗಳು ಮೂರು ಗುಂಪುಗಳಾಗಿ ಅಲ್ಲಲ್ಲಿ ಬೀಡು ಬಿಟ್ಟಿದೆ. 5 ಕಾಡಾನೆಗಳು ಮಳಗಿ ಭಾಗದಲ್ಲಿ, 7 ಕಾಡಾನೆಗಳು ಕಲಕೇರಿ-ಅಂದಲಗಿ ಭಾಗದಲ್ಲಿ ಮತ್ತು 6 ಕಾಡಾನೆಗಳು ಚವಡಳ್ಳಿ-ಕರವಳ್ಳಿ ಭಾಗದಲ್ಲಿ ಕಾಣಿಸಿಕೊಂಡಿದೆ. ಸದ್ಯ 18 ಕಾಡಾನೆಗಳು ಮೂರು ಗುಂಪುಗಳಾಗಿ ಮುಂಡಗೋಡ ತಾಲೂಕಿನ ಕೆಲವು ಗದ್ದೆಗಳ ಮೇಲೆ ದಾಳಿ ನಡೆಸುತ್ತಿದೆ.

Leave a Comment