ಕಾಡಾನೆ ದಾಳಿ; ಮೆಕ್ಕೆಜೋಳ ಬೆಳೆನಾಶ

ದಾವಣಗೆರೆ.ಅ.9; ಕಾಡಾನೆಗಳ ಹಾವಳಿಯಿಂದ ಮೆಕ್ಕೆಜೋಳ ಬೆಳೆ ಸಂಪೂರ್ಣ ನಾಶವಾದ ಘಟನೆ ಚನ್ನಗಿರಿ ತಾಲೂಕಿನ ಗೋಪನಾಳ್ ಹಾಗೂ ಹನುಮಂತ ನಗರ ಗ್ರಾಮದಲ್ಲಿ ನಡೆದಿದೆ. ಜೋಳದಾಳ್ ಅರಣ್ಯ ಪ್ರದೇಶಕ್ಕೆ ಸೇರಿರುವ ಈ ಗ್ರಾಮಗಳಲ್ಲಿ ಫಸಲಿದ್ದ ಹೊಲದೊಳಗೆ ಕಾಡಾನೆಗಳ ಹಿಂಡು ನುಗ್ಗುತ್ತಿದೆ. ಕೈಗೆ ಬಂದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಆನೆಗಳ ಹಾವಳಿಯಿಂದ ನಾಶವಾಗುತ್ತಿವೆ. ಈ ಕಾಡಾನೆಗಳ ಹಾವಳಿಯಿಂದ ನಿರಂತರವಾಗಿ ಜೋಳದಾಳ್ ಅರಣ್ಯ ಪ್ರದೇಶದ ಸುತ್ತ ಮುತ್ತಲಿನ ಬೆಳೆಗಳು ಹಾನಿಯಾಗುತ್ತಿವೆ. ಕಾಡಾನೆಗಳ ಹಾವಳಿ ತಪ್ಪಿಸುವಂತೆ ರೈತರು ಮನವಿ ಮಾಡಿದರೂ ಸಹ ಅರಣ್ಯ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಈ ಭಾಗದ ರೈತರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಷ್ಟಪಟ್ಟು ಬೆಳೆ ಬೆಳೆದಿದ್ದೇವೆ ಆದರೆ ಆನೆಗಳ ಹಾವಳಿಯಿಂದ ಬೆಳೆಯಲ್ಲಾ ನಾಶವಾಗುತ್ತಿದೆ.ಆದ್ದರಿಂದ ಅಧಿಕಾರಿಗಳು ನೆರವಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.

Leave a Comment