ಕಾಡಾನೆ ದಾಳಿ: ಕಾವಲುಗಾರನಿಗೆ ಗಂಭೀರ ಗಾಯ

ವಿರಾಜಪೇಟೆ, ಜು.13- ತಾಲ್ಲೂಕಿನ ಪಾಲಿಬೆಟ್ಟ ಪರಂಬ ಕಾಫಿ ತೋಟವೊಂದರಲ್ಲಿ ಕಾವಲು ಕಾಯುತ್ತಿದ್ದ ಕಾವಲುಗಾರನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆತನಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಗುಂಡ್ಲೂರು ಗ್ರಾಮ ನಿವಾಸಿ ರಾಮಯ್ಯ (52) ಎಂಬುವವರೇ ಕಾಡಾನೆ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ.
ರಾಮಯ್ಯನ ಮೇಲೆ ಕಾಡಾನೆ ದಾಳಿ ಮಾಡಿದ ವಿಷಯ ತಿಳಿದ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ಗಾಯಾಳುವಿನ ವೈದ್ಯಕೀಯ ವೆಚ್ಚಕ್ಕಾಗಿ 10 ಸಾವಿರ ರೂಗಳ ತುರ್ತು ಪರಿಹಾರವನ್ನು ಘೋಷಿಸಿದರು. ತಾಲ್ಲೂಕಿನಾದ್ಯಂತ ಮೇಲಿಂದ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿದ್ದರೂ ಅರಣ್ಯಾಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

Leave a Comment