ಕಾಟಾಚಾರಕ್ಕೆ ಕುಡಾ ಸಭೆ- ಸದಸ್ಯರ ಆಕ್ರೋಶ

ಕಲಬುರಗಿ,ಅ.12- ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕೇವಲ ಕಾಟಚಾರಕ್ಕೆ ನಡೆಸಲಾಗುತ್ತಿದ್ದು, ಕುಡಾ ಅಭಿವೃದ್ಧಿಯ ಮಾಹಿತಿ ನೀಡದ ಪ್ರಾಧಿಕಾರದ ಕ್ರಮವನ್ನು ಖಂಡಿಸಿದ ಕುಡಾ ಸದಸ್ಯರು ಸಭೆಯನ್ನು ಭಹಿಷ್ಕರಿಸುವುದಾಗಿ ಕುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಎಚ್ಚಿರಿಸಿದ್ದಾರೆ.
ಪ್ರಾಧಿಕಾರದ ಸಭೆ ಮತ್ತು ಅಭಿವೃದ್ಧಿಯ ನಿಯಮಾವಳಿಯ ಮಾಹಿತಿಯನ್ನು ಕುಡಾ ಸದಸ್ಯರಿಗೆ ತಿಳಿಸಬೇಕು, ಸಭೆಯ ಗೋತ್ತುವಳಿಯ ಕರಡಿನ ಪ್ರತಿಯನ್ನು ನೀಡಬೇಕು, ಸಭೆಯ ನಡವಳಿಕೆಯನ್ನು ಕಡ್ಡಾಯವಾಗಿ ವಿಡಿಯೋ ರಿಕಾರ್ಡಿಂಗ್ ಮಾಡಬೇಕು ಎಂಬ ಪ್ರಮುಖ ಬೇಡಿಕೆಯ ಮನವಿಯನ್ನು ಆಯುಕ್ತರಿಗೆ ಸಲ್ಲಿಸಲಾಯಿತು.
ಕುಡಾ ಕೆಡಿಪಿ ಸದಸ್ಯರಾದ ಪ್ರವೀಣಕುಮಾರ್ ಪಾಟೀಲ್ ಹರವಾಳ, ಶಾಮರಾವ ನಾಟಿಕಾರ್, ನಾಗಮ್ಮಾ ಒಂಟಿ, ವೆಂಕಟೇಶ ಅನಂತರಾವ ಪಾಟೀಲ್, ಬಸವರಾಜ ಖಂಡೇರಾವ ಅವರು ಲಿಖಿತ ಮನವಿನೀಡಿ ಒತ್ತಾಯಿಸಿದ್ದಾರೆ.

Leave a Comment