ಕಾಂಗ್ರೇಸ್ ಭದ್ರಕೋಟೆಯಲ್ಲಿ ಅರಳಿದ ಕಮಲ

ಗುಂಡ್ಲುಪೇಟೆ, ಮೇ.16- ತಾಲ್ಲೂಕಿನಲ್ಲಿ ಭದ್ರಕೋಟೆಯೆಂದೇ ಎಂದೇ ಪ್ರಸಿದ್ದವಾಗಿದ್ದ ಕಾಂಗ್ರೇಸ್ ಪಕ್ಷವನ್ನು ಸೋಲಿಸಿ ಕಮಲವನ್ನು ಅರಳಿಸಿದ ಘಟನೆ ಈ ಭಾರಿ ನಡೆದ ವಿಧಾನಸಭೆ ಚುನಾವಣೆ ಆಶ್ಚರ್ಯ ರೀತಿಯಲ್ಲಿ ತಿರುವುಕಂಡಿದೆ.
ಈ ಹಿಂದೆ ತಾಲ್ಲೂಕಿನಲ್ಲಿ 3 ಬಾರಿ ವಿಧಾನಸಭಾ ಚುನಾವಣೇಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್‍ರವರು ಸೋತು ಸುಣ್ಣವಾಗಿದ್ದರು. ಆದರೇ ಈ ಬಾರಿ ಚುನಾವಣೆಯಲ್ಲಿ ಸಿ.ಎಸ್.ನಿರಂಜನ್ ಕುಮಾರ್ ಕಂಡಂತಹ ಕನಸನ್ನು ತಾಲ್ಲೂಕಿನ ಮತದಾರ ಪ್ರಭುಗಳು ನನಸು ಮಾಡಿದ್ದಾರೆ. ಹಲವು ಬಾರಿ ಸೋತಿದ್ದರೂ ಸಹ ಬೆಂಬಿಡದೇ ಸತತ ಪ್ರಯತ್ನ ಮಾಡಿ ಈ ಬಾರಿಗೆಲುವನ್ನು ಕಂಡುಕೊಂಡಿದ್ದಾರೆ. ತಾಲ್ಲೂಕಿನಲ್ಲಿ 12 ಬಾರಿ ವಿಧಾನಸಬಾ ಸಭೆ ನಡೆದಿದೆ. ಆದರೇ ಬಿಜೆಪಿ ಪಕ್ಷಒಂದು ಬಾರಿಯೂ ಕೂಡಗೆಲುವನ್ನು ಕಂಡಿರಲಿಲ್ಲ.
12 ವಿಧಾನಸಭಾ ಚುನಾವಣೆಯಲ್ಲಿ ಕೆ.ಎಸ್ ನಾಗರತ್ನಮ್ಮರವರು ಸತತ 7 ಬಾರಿ ಮತ್ತು ದಿವಂಗತ ಹೆಚ್ ಮಹದೇವ ಪ್ರಸಾದ್‍ರವರು ಸತತ 5 ಬಾರಿ ವಿವಿಧ ಪಕ್ಷಗಳಿಂದ ಗೆಲುವು ಕಂಡಿದ್ದರು. ಆದರೇ ಬಿಜೆಪಿ ಪಕ್ಷ ಸತತವಾಗಿ ಸೋಲುತ್ತಲೇ ಬಂದಿದೆ.ಸೋತರು ಸಹ ಬಿಜೆಪಿ ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಯಾವುದೇ ರೀತಿಯ ಆಸಕ್ತಿ ಕಡಿಮೆ ಆಗಿಲ್ಲ. ಸತತ ಪ್ರಯತ್ನಂ ಸಫಲಂ ಎಂಬ ನಾಣ್ಣುಡಿಯಂತೆ ಹಲವು ಬಾರಿ ಸೋಲುಂಡರೂ ಸಹ ತಾಳ್ಮೆಯಿಂದ ಕಾದುಕುಳಿತು ಈ ಬಾರಿ ಭರ್ಜರಿಗೆಲುವನ್ನು ಕಂಡು ವಿರೋಧ ಪಕ್ಷಕ್ಕೆ ಸೋಲುಣಿಸಿದ್ದಾರೆ.
ಹರ್ಷೋದ್ಗಾರ
ಕಳೆದ ಬಾರಿ ಉಪಚುನಾವಣೆಯಲ್ಲೂ ಸಹ ಸೋಲನ್ನು ಕಂಡಿದ್ದ ಸಿ.ಎಸ್.ನಿರಂಜನ್ ಕುಮಾರ್‍ರವರನ್ನು ಮತದಾರ ಪ್ರಭುಗಳು ಇವರನ್ನು ಗೆಲ್ಲಿದುವ ಮುಖಾಂತರ ತಾಲ್ಲೂಕಿನಲ್ಲಿ ಒಂದು ಇತಿ ಹಾಸವನ್ನೇ ಸೃಷ್ಟಿ ಮಾಡಿದ್ದಾರೆ. ಇವರು ಗೆಲುವನ್ನು ಕಂಡರು ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನಾಯಕನನ್ನು ಬರಮಾಡಿಕೊಳ್ಳು ಕಾರ್ಯಕರ್ತರು ತಾಲ್ಲೂಕಿನ ಎಲ್ಲಾಕಡೆ ಎಲ್ಲರಿಗೂ ಸಿಹಿ ಹಂಚಿ ಸುಮಾರು ಕಿ.ಮೀ ಗಟ್ಟಲೇ ಸಾಲುಸಾಲಾಗಿ ರಸ್ತೆಯುದ್ದಕ್ಕೂ ನಿಂತು ಮೋದಿ ಸರ್ಕಾರಕ್ಕೆ ಮೋದಿಗೆ, ಯಡೀಯೂರಪ್ಪರಿಗೆ ಪಟಾಕಿ ಸಿಡಿಸುವ ಮೂಲಕ ತಮ್ಮ ಹರ್ಷೋದ್ಘಾರವನ್ನು ತೋಡಿಕೊಂಡರು.
ಇತಿಹಾಸ ಸೃಷ್ಟಿ ಮಾಡಿದಕೇತ್ರ
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೆ.ಎಸ್.ನಾಗರತ್ನಮ್ಮ ಬದುಕಿರುವವರೆಗೂ ದಿವಂಗತ ಹೆಚ್.ಎಸ್ ಮಹದೇವಪ್ರಸಾದ್‍ರವರು ಗೆಲುವು ಕಾಣಲು ಆಗಲಿಲ್ಲ. ಆದರೇ ಕೆ.ಎಸ್.ನಾಗರತ್ನಮ್ಮರವರ ಮರಣದ ನಂತರ ಹೆಚ್.ಎಸ್.ಎಂರವರು ಸತತವಾಗಿ 5 ಬಾರಿಗೆಲುವನ್ನು ಕಂಡರು. ಮಹದೇವಪ್ರಸಾದ್‍ರವರು ಬದುಕಿರುವವರೆಗೂ ಸಿ.ಎಸ್.ನಿರಂಜನ್ ಕುಮಾರ್ ಗೆಲುವು ಕಾಣಲು ಆಗಲಿಲ್ಲ. ಆದರೇ ಉಪಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಗೀತಾ ಮಹದೇವಪ್ರಸಾದ್‍ರವರು ಗೆಲುವನ್ನು ಕಂಡರು. ಅದಾದ ನಂತರ ನೆನ್ನೆ ನಡೆದಂತಹ ಚುನಾವಣೆಯಲ್ಲಿ ಸಿ.ಎಸ್.ನಿರಂಜನ್ ಕುಮಾರ್ ಹೆಚ್.ಎಸ್.ಎಂರವರಿಗಿಂತಲೂ ಹೆಚ್ಚು ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ. ಆದ್ದರಿಂದ ಗುಂಡ್ಲುಪೇಟೆ ತಾಲ್ಲೂಕು ಒಂದು ಇತಿಹಾಸ ಪುಟ ಸೇರಿಕೊಂಡಂತಿದೆ.
ತಿರುಗೇಟು
ಕಾಂಗ್ರೇಸ್ ಪಕ್ಷ ಸೋಲಲು ಅವರು ಆಡಿದ ಮಾತುಗಳೇ ಕಾರಣವೇ?….
ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರ ಚುನಾವಣೆಯ ಪ್ರಚಾರದಲ್ಲಿ ತೊಡಗಿದ ಗೀತಾ ಮಹದೇವಪ್ರಸಾದ್‍ರವರು ತಾಲ್ಲೂಕಿನತೆರಕಣಾಂಬಿ ಹೋಬಳಿಯಲ್ಲಿ ಪ್ರಚಾರ ಮಾಡುವ ಸಂಧರ್ಭದಲ್ಲಿ ಸಾರ್ವಜನಿಕರೆದುರಿಗೆ ಸೂರ್ಯ ಚಂದ್ರರಿರುವರೆಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಮ್ಮ ಕುಟುಂಬವೇ ಅಧಿಕಾರವನ್ನು ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದರಿಂದ ತಾಲ್ಲೂಕಿನ ಜನತೆಗೆ ಈ ಮಾತಿನಿಂದ ಬೇಸರವಾಗಿತ್ತು. ಇವರು ಆಡಿದಗಡಸು ಮಾತಿನಿಂದ ಮತದಾರ ಪ್ರಭುಗಳು ಬದಲಾವಣೆಯನ್ನು ಬಯಸಿ ಈ ಬಾರಿ ಸಿ.ಎಸ್ ನಿರಂಜನ್‍ಕುಮಾರ್‍ರವರನ್ನು ಗೆಲಿಸುವ ಮೂಲಕ ನಿಮ್ಮ ಕುಟುಂಬವನ್ನು ಬಿಟ್ಟು ಬೇರೆಯವರು ಸಹ ಗೆಲಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ.

Leave a Comment