ಕಾಂಗ್ರೆಸ್ ಸಮಾವೇಶ : ಶ್ರಾವಣ ಶನಿವಾರದ ಭರ್ಜರಿ ಊಟ

ರಾಯಚೂರು.ಆ.13- ಶ್ರಾವಣ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಸಾಂಪ್ರದಾಯಿಕ ಹುಗ್ಗಿ ಮತ್ತು ಮೃಷ್ಟಾನ್ನ ಭೋಜನ ರುಚಿ ಕಾಂಗ್ರೆಸ್ ಸಮಾವೇಶ ಸವಿಯುವ ಅವಕಾಶ ದೊರೆಯಿತು.
ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶಕ್ಕೆ ಜನ ಸಾಗರ ಹರಿದು ಬಂದಿತ್ತು. ಪೊಲೀಸ್ ಇಲಾಖೆ ಮಾಹಿತಿಯಂತೆ 1 ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಭಾರೀ ಸಂಖ್ಯೆಯ ಜನರಿಗೆ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೊಳಿಸಿತು. ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಹುಲ್ ಗಾಂಧಿ ಅವರ ಈ ಕಾರ್ಯಕ್ರಮ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿತರ ಸಚಿವರು ಸೇರಿದಂತೆ ಘಟಾನುಘಟಿ ಮುಖಂಡರು ಪಾಲ್ಗೊಳ್ಳುವ ಈ ಸಮಾವೇಶದಲ್ಲಿ ಯಾವುದೇ ತೊಂದರೆಯಾಗದಂತೆ ವಿಶೇಷವಾಗಿ ಊಟದ ಸಮಸ್ಯೆ ಉಂಟಾಗದಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಭಾಗದ ಸಾಂಪ್ರದಾಯಿಕ ಸಿಹಿ ಊಟವಾದ ಹುಗ್ಗಿಯ ರುಚಿ ಸಮಾವೇಶಕ್ಕೆ ಆಗಮಿಸುವವರ ಹಸಿವು ನೀಗಿಸುವುದರೊಂದಿಗೆ ರುಚಿಯಿಂದ ಬಾಯಿ ಚಪ್ಪರಿಸುವಂತೆ ಮಾಡಿತು. ಸಮಾವೇಶ ಪೂರ್ವದ ದಿನ ಮಳೆಯಿಂದಾಗಿ ಕೃಷಿ ವಿಶ್ವವಿದ್ಯಾಲಯ ಆವರಣ ನೆನೆದು ಕೇಸರುಮಯವಾಗಿದ್ದರೂ, ಊಟಕ್ಕೆ ಯಾವುದೇ ತೊಂದರೆಯಾಗದಂತೆ ಭಾರೀ ಎಚ್ಚರಿವಹಿಸಲಾಯಿತು. 60 ರಿಂದ 65 ಕೌಂಟರ್ ತೆರೆಯುವ ಮೂಲಕ ಸಾವಿರಾರು ಸಂಖ್ಯೆಯ ಜನರಿಗೆ ಯಾವುದೇ ತೊಂದರೆಯಾಗದಂತೆ ಊಟದ ವ್ಯವಸ್ಥೆ ಒದಗಿಸಲಾಗಿತ್ತು.
50 ರಿಂದ 60 ಕ್ವಿಂಟಲ್ ಗೋಧಿ, ಬೆಲ್ಲದಿಂದ ಹುಗ್ಗಿ ಮಾಡಲಾಗಿತ್ತು. 100ಕ್ಕೂ ಅಧಿಕ ಕ್ವಿಂಟಲ್ ಅಕ್ಕಿ ಅನ್ನಕ್ಕೆ ಬಳಸಲಾಗಿತ್ತು. ಕುಡಿವ ನೀರಿನ ಪೌಚ್‌ಗಳಿಗೆ ಲೆಕ್ಕವೇ ಇಲ್ಲ ಎನ್ನುವಂತಿತ್ತು. ರಾಹುಲ್ ಗಾಂಧಿ ಅವರ ಉದ್ದೇಶಿತ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ಸುಮಾರು 1 ಗಂಟೆ ತಡವಾಗಿ ಆರಂಭಗೊಂಡಿತು. ಮುಂಜಾನೆ 11 ರಿಂದ 12 ಗಂಟೆಗೆ ನೆರೆದಿದ್ದ ಜನ ಕಾರ್ಯಕ್ರಮ ಮುಗಿಯುವ 4 ಗಂಟೆವರೆಗೂ ಕಾದು ಕುಳಿತಿರುವುದು ಗಮನಾರ್ಹವಾಗಿತ್ತು.
ಕಾರ್ಯಕ್ರಮಕ್ಕೆ ಪಾಲ್ಗೊಗೊಂಡಿರುವ ಎಲ್ಲಾರ ಊಟಕ್ಕೆ ಕ್ರಮ ಕೈಗೊಳ್ಳಲಾಗಿತ್ತು. 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರೀತಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಸಂಸದ ಬಿ.ವಿ.ನಾಯಕ, ರವಿ ಬೋಸರಾಜು ಅವರ ಬಳಗ ವಹಿಸಿಕೊಂಡಿತ್ತು.
ವಿವಿಐಪಿಗಳಿಗೂ ಊಟದ ವ್ಯವಸ್ಥೆ ಉತ್ತಮವಾಗಿ ಮಾಡಲಾಗಿತ್ತು. ಒಟ್ಟಾರೆಯಾಗಿ ನಿನ್ನೆ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಊಟ ಕಾಂಗ್ರೆಸ್ ಕಾರ್ಯಕರ್ತರ ಗಂಟೆಗಳ ಹಸಿವು ಮತ್ತು ದಣಿವು ನಿವಾರಿಸುವಲ್ಲಿ ಯಶಸ್ವಿಯಾಯಿತು.

Leave a Comment