ಕಾಂಗ್ರೆಸ್ ಬೆಂಬಲಿಸಲು ಡಿ.ಎಸ್.ಎಸ್ ಡಿ.ಜಿ.ಸಾಗರ್ ಬಣ ಮನವಿ

ಬಳ್ಳಾರಿ, ಏ.19: ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವ ಬಿಜೆಪಿಗೆ ಸಂವಿಧಾನ ನೀಡಿರುವ ಹಕ್ಕುಗಳಿಂದ ಉತ್ತಮ ಬದುಕು ಕಂಡುಕೊಳ್ಳುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಜನತೆ ಬಿಜೆಪಿ ಅಭ್ಯರ್ಥಿಗಳನ್ನು ದೂರವಿಟ್ಟು, ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಮತ ನೀಡಿ ಸಂಸತ್ತಿಗೆ ಆಯ್ಕೆ ಮಾಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿ.ಜಿ.ಸಾಗರ ಬಣ ಮನವಿ ಮಾಡಿದೆ.

ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ, ಜಿಲ್ಲಾ ಸಂಚಾಲಕ ಹೆಚ್.ಸಿದ್ದೇಶ ಮೊದಲಾದ ಮುಖಂಡರು ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ, ಮೀಸಲಾತಿ ತಿದ್ದುಪಡಿ, ಸಂವಿಧಾನ ಬದಲಾವಣೆ ಯತ್ನ ಮಾಡುವ ಬಿಜೆಪಿ ಸರ್ಕಾರ ದಲಿತರ ಪರವಾದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ ಧೋರಣೆ ತೋರಿದೆ.

ರಾಜ್ಯದಲ್ಲಿ ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ಸದಾಶಿವ ಆಯೋಗದ ವರದಿ ಜಾರಿಗೆ ತರುವ ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿತ್ತು. ಆದರೆ ಅದಕ್ಕೆ ಕೆಲ ಸಚಿವರ ಆಕ್ಷೇಪದಿಂದ ಹಾಗೇ ಉಳಿದಿದೆ. ಆದರೆ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮ ಸ್ಥಾಪಿಸಿ ದಲಿತರಿಗೆ ಸಹಕಾರ ಮಾಡಿದ್ದಾರೆಂದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ಬಹುಸಂಸ್ಕೃತಿ ಸಮಾಜವನ್ನು ಛಿದ್ರಗೊಳಿಸಿದ್ದಾರೆ.
ಮೇಲ್ವರ್ಗದವರ ದಬ್ಬಾಳಿಕೆಗೆ ಗುರಿಪಡಿಸಿದ್ದಾರೆ. ಮೋದಿ ಏಕ ವ್ಯಕ್ತಿ ಅಧಿಕಾರ ನಡೆಸುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅದಕ್ಕಾಗಿ ದಲಿತರ ಏಳಿಗೆಗೆ ಬದ್ಧವಾಗಿರುವ ಕಾಂಗ್ರೆಸ್ ಬೆಂಬಲಿಸಲು ನಮ್ಮ ಸಂಘಟನೆ ಸಮುದಾಯಕ್ಕೆ ಕರೆ ನೀಡುತ್ತದೆಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಂ.ಎಱ್ರಿಸ್ವಾಮಿ, ಎ.ಕೆ.ಗಾದಿಲಿಂಗಪ್ಪ, ಟಿ.ದುರುಗಪ್ಪ, ಕೆ.ಗಾದಿಲಿಂಗಪ್ಪ, ಮೊದಲಾದವರು ಇದ್ದರು.

Leave a Comment