ಕಾಂಗ್ರೆಸ್ ಬೆಂಬಲಕ್ಕೆ ಮಾದಿಗ ಸಮಾಜ ಮುಖಂಡರ ನಿರ್ಧಾರ

ರಾಯಚೂರು.ಏ.16- ಲೋಕಸಭಾ ಚುನಾವಣೆ ಹಿನ್ನೆಲೆ ಮಾದಿಗ ಸಮುದಾಯದ ಮುಖಂಡರ ಮಹತ್ವದ ಸಭೆ ಇಂದು ನಗರದಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಿದ ನಂತರ ಸಮುದಾಯದ ರಾಜಕೀಯ ಅಭಿವೃದ್ಧಿ ಹಿನ್ನೆಲೆ, ಕಾಂಗ್ರೆಸ್ ಪಕ್ಷದ ಬಿ.ವಿ.ನಾಯಕ ಅವರಿಗೆ ಚುನಾವಣೆಯಲ್ಲಿ ಬೆಂಬಲಿಸಲು ತೀರ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಅನೇಕ ಮುಖಂಡರು ಈ ಸಭೆಗೆ ಆಗಮಿಸಿದ್ದರು. ಸಲಹೆ ಸೂಚನೆ ನೀ‌ಡಿ ಒಮ್ಮತದಿಂದ ನಿರ್ಧರಿಸಲಾಯಿತು. ಎಲ್ಲರ ಸಲಹೆ, ಸೂಚನೆಯನ್ನಾಧರಿಸಿ, ಸಮುದಾಯದ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ನಿರ್ಧರಿಸಲಾಯಿತು. ಮಾದಿಗ ಸಮುದಾಯದ ಈ ಸಭೆ ತೀರ್ಮಾನ ಕಾಂಗ್ರೆಸ್ಸಿಗೆ ಭಾರೀ ಆನೆಬಲ ನೀಡಿದಂತಾಗಿದೆ. ಅತಿ ಹೆಚ್ಚಿನ ಸಂಖ್ಯೆಯ ಸಮುದಾಯದ ನಾಯಕರ ನಿರ್ಧಾರದಿಂದ ಚುನಾವಣಾ ಪ್ರಚಾರ ಮತ್ತಷ್ಟು ಬಿರುಸುಗೊಳ್ಳುವಂತೆ ಮಾಡಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ, ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯರಾದ ಜಯಣ್ಣ, ಪಾಮಯ್ಯ ಮುರಾರಿ, ಹೆಚ್.ಬಿ.ಮುರಾರಿ, ಹನುಮಂತು, ಬೂದೆಪ್ಪ ಸೇರಿದಂತೆ ಅನೇಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Comment