ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಿ

ರಾಯಚೂರು.ಸೆ.06- ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಸದಸ್ಯರ ಒಗ್ಗಟ್ಟು ಪ್ರದರ್ಶಿಸಿದರೆ ನಗರಸಭೆ ಬಿಜೆಪಿ ಕೈವಶವಾಗಲಿದೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ಅವರಿಂದು ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಆಯ್ಕೆಯಾಗಿರುವ ನಗರಸಭೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವಾರ್ಡ್‌ನ ಮತದಾರರಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ತಿಳಿಸಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ ನಗರಸಭೆ ಬಿಜೆಪಿ ಕೈವಶ ಮಾಡಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕೆಂದು ತಿಳಿಸಿದರು.
ಅಶೋಕ್ ಗಸ್ತಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಲಕ್ಷ್ಮೀ ಡಿ.ನಾಗರಾಜ್, ಶರಣಬಸ್ಸಪ್ಪ ಬಲ್ಲಟಗಿ, ಬುಜ್ಜಮ್ಮ ಶಂಕ್ರಪ್ಪ, ಉಮಾ ರವೀಂದ್ರ ಜಲ್ದಾರ್, ಈ.ಶಶಿರಾಜ್, ಲಲಿತಾ ಕಡಗೋಳ್ ಆಂಜೇನೇಯ್ಯ, ಎಂ.ಕೆ.ನಾಗರಾಜ್, ಸರೋಜಮ್ಮದೊಡ್ಡ ಮಲ್ಲೇಶಪ್ಪ, ರೇಖಾ ಮಹೇದ್ರ, ನವನೀತ ಪೋಗಲ್ ಶ್ರೀನಿವಾಸ್, ವೆಂಕಟಮ್ಮ ಶ್ರೀನಿವಾಸರೆಡ್ಡಿ ಇವರನ್ನು ಸನ್ಮಾನಿಸಲಾಯಿತು. ಆರ್.ತಿಮ್ಮಯ್ಯ, ಯು.ದೊಡ್ಡ ಮಲ್ಲೇಶಪ್ಪ, ರಾಜಕುಮಾರ್, ಕೇಶವರೆಡ್ಡಿ, ರವೀಂದ್ರ ಜಲ್ದಾರ್, ಕಡಗೋಳ್ ಆಂಜಿನೇಯ್ಯ, ರಾಮಚಂದ್ರ ಕಡಗೋಳ್, ಪ್ರದೀಪ್ ಶಾನಬಾಳ, ಎ.ಚಂದ್ರಶೇಖರ, ಶ್ರೀನಿವಾಸ ರೆಡ್ಡಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment