ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭ

ಕಾಂಗ್ರೆಸ್ ಪಕ್ಷ ಭದ್ರಪಡಿಸಲು ಖಂಡ್ರೆ ಕರೆ
ರಾಯಚೂರು.ನ.13- ಕಾಂಗ್ರೆಸ್ ಭದ್ರಕೋಟೆಯೆಂದೆ ಪ್ರಸಿದ್ಧಿಯಾಗಿರುವ ರಾಯಚೂರು ಜಿಲ್ಲೆಯು ಪಕ್ಷವನ್ನು ಭದ್ರಪಡಿಸಲು ಬಿ.ವಿ.ನಾಯಕರವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅವರಿಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಂತರ ಉದ್ದೇಶಿಸಿ ಮಾತನಾಡಿದ ಅವರು ಬಿ.ವಿ.ನಾಯಕರವರು ಸಂಸದರಾಗಿ 5 ವರ್ಷಗಳ ಕಾಲ ಜನರ ಸೇವೆಗೆ ಪಾತ್ರರಾಗಿದ್ದರು. ಇವರು ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವರು. ಇವರ ಕುಟುಂಬವು ಸಮಾಜಕ್ಕೆ ಸೇವೆ ಸಲ್ಲಿಸಿರುವುದು ಗಣನೀಯ ಸಾಧನವಾಗಿದೆ.
ಕಾಂಗ್ರೆಸ್‌ವೊಂದು ರಾಜಕೀಯ ಪಕ್ಷವಲ್ಲದೆ ಇದೊಂದು ಆಂದೋಲನ ಪಕ್ಷವಾಗಿದೆ. ದೇಶಕ್ಕೆ ಇಂದಿರಾಗಾಂಧಿ, ರಾಜೀವ್ ಗಾಂಧಿ ತ್ಯಾಗ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ನೈತಿಕತೆಯಿಲ್ಲ. ದೇಶದಲ್ಲಿ ಭಯದ ವಾತಾವರಣ ಹುಟ್ಟು ಹಾಕುತ್ತಿದೆ. ಬಿಜೆಪಿ ಪಕ್ಷದ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ. ಬಿಜೆಪಿಯು ಅಧಿಕಾರ ಪೂರ್ವದಲ್ಲಿ ಜನರಿಗೆ ಆಶ್ವಾಸನೆ ನೀಡಿತ್ತು. ಆದರೆ ಇದುವರೆಗೂ ಅಚ್ಛೆ ದಿನ್ ಬರಲಿಲ್ಲ. ಇವರೆಲ್ಲ ನಕಲಿ ರಾಷ್ಟ್ರಭಕ್ತರು. ಬಿಜೆಪಿ ಪಕ್ಷದಲ್ಲಿ ಸ್ವತಂತ್ರಪೂರ್ವ ಯಾರಾದರೂ ಸ್ವತಂತ್ರ ಹೋರಾಟಕ್ಕೆ ಮುಂದು ಬಂದಿದ್ದಾರೆಯೇ? ಎಂದು ಹೇಳಿದರು.
ಯುವಕರಿಗೆ ಬಿಜೆಪಿ ಪಕ್ಷದವರು ಯುವಕರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನೋಟ್ ಬ್ಯಾನ್‌ನಿಂದ ಸಣ್ಣಪುಟ್ಟ ರೈತರಿಗೆ, ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ಯಾವುದೇ ಉಪಯೋಗವಾಗಲಿಲ್ಲ. ಹಾಗೂ ರಾಷ್ಟ್ರದ ಆರ್ಥಿಕತೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸರಾಸರಿ ಶೇ.8.5 ಮೌಲ್ಯವಿದ್ದು ಇಂದು ಶೇ.5 ರಷ್ಟು ಮೌಲ್ಯ ಕುಸಿತದಲ್ಲಿದೆ. ಹಾಗೂ ಮನಮೋಹನ ಸಿಂಗ್ ಅವರ ಅವಧಿಯಲ್ಲಿ ಶೇ.2.2 ರಷ್ಟು ನಿರುದ್ಯೋಗವಿತ್ತು. ಆದರೆ ಇಂದು ಶೇ.8.5 ರಷ್ಟು ನಿರುದ್ಯೋಗ ಉಂಟಾಗಿದೆ. ಇದರಿಂದ ಯುವಕರಿಗೆ ತೀವ್ರ ತೊಂದರೆಯಾಗಿದೆ ಎಂದರು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ, ನೂತನ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್.ಹೂಲಿಗೇರಿ, ಹಂಪನಗೌಡ ಬಾದರ್ಲಿ, ಸೈಯದ್ ಯಾಸೀನ್, ರಾಮಣ್ಣ ಇರಬಗೇರಾ, ಹಂಪಯ್ಯ ಸಾಹುಕಾರ, ಶರಣಪ್ಪ ಮಟ್ಟೂರು, ಎ.ವಸಂತಕುಮಾರ, ನಗರಸಭೆ ಸದಸ್ಯ ಜಯಣ್ಣ, ರುದ್ರಪ್ಪ ಅಂಗಡಿ, ಸಂದೀಪ, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಬೆಣ್ಣೆ, ಅರುಣ ದೋತರಬಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment