ಕಾಂಗ್ರೆಸ್ ಜಯಭೇರಿ: ಬಿಜೆಪಿಗೆ ಹೀನಾಯ ಸೋಲು

ದೇವದುರ್ಗ.ಸೆ.೩-ಸ್ಥಳೀಯ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಅಧಿಕೃತವಾಗಿ ಪ್ರಕಟಣೆಯಾಗಿದ್ದು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುತಮ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ತೀವ್ರ ಮುಖಭಂಗ ಎದುರಿಸಿದೆ.
ಒಟ್ಟು ೨೩ ವಾರ್ಡ್‌ಗಳ ಪೈಕಿ ವಾರ್ಡ್ ಸಂಖ್ಯೆ ೧೯ ರಲ್ಲಿ ಪಕ್ಷೇತ್ರ ಅಭ್ಯರ್ಥಿ ಸಾಬಮ್ಮ ಗುಂಡಪ್ಪ ಅವರು ಅವಿರೋಧವಾಗಿ ಆಯ್ಕೆಯಾದ ನಂತರ ೨೨ ವಾರ್ಡ್‌ಗಳಿಗೆ ಚುನಾವಣೆ ನಡೆದಿತು.
ಸೋಮವಾರ ಬೆಳಗ್ಗೆ ೮.೫ ಗಂಟೆಗೆ ಆರಂಭವಾದ ಮತ ಏಣಿಕೆ ಕಾರ್ಯ ೧ಗಂಟೆಯಲ್ಲಿಯೇ ಇಡೀ ೨೨ ವಾರ್ಡ್‌ಗಳ ಫಲಿತಾಂಶ ಹೊರ ಬಿದ್ದತ್ತು. ಪ್ರತಿ ೬ ಟೇಬಲ್‌ಗೆ ೬ ವಾರ್ಡ್‌ಗಳ ಫಲಿತಾಂಶ ಹೊರ ಬಿದ್ದ ನಂತರ ಜಯ ಗಳಿಸಿದ ಅಭ್ಯರ್ಥಿಗಳ ಅಭಿಮಾನಿಗಳು ಮತ್ತು ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ಶಾಸಕ ಕೆ. ಶಿವನಗೌಡ ನಾಯಕ ಅವರು ಬಿಜೆಪಿ ಪಕ್ಷದವರಾಗಿದ್ದರೂ ಸ್ಥಳೀಯ ಚುನಾವಣೆಯಲ್ಲಿ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾದರು. ಕೆಲವು ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದು ಪಕ್ಷಕ್ಕೆ ತೀವ್ರ ಮುಖ ಭಂಗವಾಗಿದೆ. ಕಳೆದ ಭಾರಿಯ ಪುರಸಭೆ ಫಲಿತಾಂಶ ಗಮನಿಸಿದರೆ ಈ ಭಾರೀ ಜೆಡಿಎಸ್ ಪಕ್ಷ ಮೂರು ಸ್ಥಾನಗಳಲ್ಲಿ ಗೆಲವು ಕಂಡಿದ್ದು, ೨ ವಾರ್ಡ್‌ಗಳಲ್ಲಿ ತನ್ನ ಫಲಿತಾಂಶ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಪಕ್ಷದ ಮುಕಂಡರಾದ ರಾಜಶೇಖರ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಿಗಿ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿ ವಾರ್ಡ್‌ಗಳಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಜೆಡಿಎಸ್‌ದಿಂದ ಕರೆಮ್ಮ ಗೋಪಾಲಕೃಷ್ಣ ಅವರು ಸಹ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲವಿಗಾಗಿ ಅವಿರತ ಪ್ರಯತ್ನ ಮಾಡಿದ್ದರು. ಬಿಜೆಪಿಯಿಂದ ಶಾಸಕ ಕೆ. ಶಿವನಗೌಡ ನಾಯಕ ಅವರು ಈ ಭಾರೀ ಪ್ರಚಾರಕ್ಕೆ ಹೆಚ್ಚು ಗಮನ ಹರಿಸದೆ ಇರುವುದಕ್ಕೆ ಪಕ್ಷದ ವೇದಿಕೆಯಲ್ಲಿ ಚರ್ಚೆಗಳು ಸಹ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಹ್ಯಾಟ್ರಿಕ್: ವಾರ್ಡ್ ಸಂಖ್ಯೆ ೨೧ರ ಜೆಡಿಎಸ್ ಪಕ್ಷದ ಅಭ್ಯರ್ಥಿ ತಬ್ಬುಸುಮ್ ಶಾಲಂ ಉದ್ದಾರ ಅವರು ಸತತವಾಗಿ ಮೂರು ಭಾರಿ ಇದೇ ವಾರ್ಡ್‌ನಿಂದ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಗೆಲವು ಕಂಡುಕೊಂಡರು.
ಈ ಭಾರೀ ಚುನಾವಣೆಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಚಂದಪ್ಪ ಅಕ್ಕರಿಕಿ ಸೇರಿದಂತೆ ಮಾಜಿ ಸದಸ್ಯರಾದ ಶರಣಬಸವ ವಕೀಲ, ಟಿ. ಜಾಕೀರ ಹುಸೇನ ಅವರು ಸೋಲು ಅನುಭವಿಸಿದ್ದಾರೆ.
ವಿಜಯೋತ್ಸವ: ವಿವಿಧ ವಾರ್ಡ್‌ಗಳಲ್ಲಿ ಜಯಗಳಿಸಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ವಿಜಯೋತ್ಸವ ಆಚರಣೆ ಮಾಡಿಮಾಡಿದರು. ಪುರಸಭೆಯ ಅಧಿಕಾರದ ಗದ್ದುಗೆ ಹಿಡಿಯಲಿರುವ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.

Leave a Comment