ಕಾಂಗ್ರೆಸ್ ಜನಾಶೀರ್ವಾದಕ್ಕೆ ಉತ್ತಮ ಪ್ರತಿಕ್ರಿಯೆ: ರಾಹುಲ್ ಗಾಂಧಿ

ಕಲಬುರಗಿ,ಫೆ.13- ಮೂರು ದಿನಗಳ ಕಾಂಗ್ರೆಸ ಜನಾಶೀರ್ವಾದ ಯಾತ್ರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದರು.

ಇಂದು ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಕಾಂಗ್ರೆಸ ಜನಾಶೀರ್ವಾದದ ತಮ್ಮ ಯಾತ್ರೆಗೆ ಇಲ್ಲಿನ ನಾಗರಿಕರಿಂದ ಸ್ವಾಗತ ಹಾಗೂ ಬೆಂಬಲ ವ್ಯಕ್ತವಾಗಿದ್ದು, ಇದು ತಮಗೆ ತೃಪ್ತಿ ಮತ್ತು ಸಂತೋಷವನ್ನುಂಟ ಮಾಡಿದೆ ಎಂದರು.

ನಕಲಿ ಹಿಂದುವಾದಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಅವರು, ಈ ಬಗ್ಗೆ ಬಿಜೆಪಿ ಅವರನ್ನೆ ಕೇಳಬೇಕು ಎಂದಷ್ಟೆ ಹೇಳಿದರು. ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಹೋದ ಆರೋಪಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Leave a Comment