ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ನಾಳೆಗೂ ಮುಂದುವರಿಕೆ

ಬಳ್ಳಾರಿ, ಅ.11: ಇಲ್ಲಿನ ಲೋಕಸಭಾ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷ ಹೆಣಗಾಡುತ್ತಿದ್ದು ಸಭೆಗಳ ಮೇಲೆ ಸಭೆ ಕರೆದು ಚರ್ಚಿಸುತ್ತಿದ್ದರೂ ಈ ಕಗ್ಗಂಟು ನಾಳೆಗೂ ಮುಂದುವರಿಯುವ ಲಕ್ಷಣಗಳು ಕಂಡುಬಂದಿದೆ.

ಮೊದ, ಮೊದಲು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಸಹೋದರ ಇಂಜಿನೀಯರಿಂಗ್ ಪದವೀಧರ ವೆಂಕಟೇಶ ಪ್ರಸಾದ್ ಗೆ ಟಿಕೆಟ್ ದೊರೆಯಲಿದೆ ಎನ್ನುವ ಸಾಧ್ಯತೆಗಳು ಸ್ಪಷ್ಟವಾಗಿದ್ದವು. ಆದರೆ ರಾಜ್ಯದಲ್ಲಿ ಪಕ್ಷ ಆಡಳಿತದಲ್ಲಿರುವುದರಿಂದ ಎಲ್ಲರ ಪ್ರಯತ್ನದಿಂದ ಬಿಜೆಪಿ ವಿರುದ್ಧ ಗೆದ್ದರೆ ಅದರ ಆಧಾರದ ಮೇಲೆ ಸಚಿವಸ್ಥಾನ ಪಡೆಯಲು ನಾಗೇಂದ್ರ ಅವರಿಗೆ ಸಹಕಾರಿಯಾಗುತ್ತಿದೆಂದು ಸಚಿವಸ್ಥಾನದ ಆಕಾಂಕ್ಷಿಗಳು ನಾಗೇಂದ್ರ ಅವರ ಸಹೋದರನಿಗೆ ಟಿಕೆಟ್ ನೀಡಲು ಪ್ರತ್ಯಕ್ಷವಾಗಿ ವಿರೋಧ ಮಾಡದಿದ್ದರೂ ಪ್ರತ್ಯೇಕವಾಗಿ ಈ ಅಭಿಪ್ರಾಯ ಮಂಡಿಸಿದ್ದಾರಂತೆ.

ಕೆಲ ಶಾಸಕರಂತೂ ಇನ್ನು ಈ ಕುರಿತು ಸಭೆಗೆ ಈ ವರೆಗೆ ಹಾಜರಾಗಿ ತಾವು ಚುನಾವಣೆ ಎದುರಿಸಲು ಸಿದ್ದ. ಯಾರಿಗೇ ಟಿಕೆಟ್ ನೀಡಿ ಎಂದು ಹೇಳಿಯೇ ಇಲ್ಲ. ಇಂತವರಿಗೆ ಟಿಕೆಟ್ ಕೊಡಿ ಎಂದು ತಿಳಿಸದೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವರ್ತಿಸುತ್ತಿದ್ದಾರೆ.

ಕ್ಷೇತ್ರ ಎಸ್ಟಿಗೆ ಮೀಸಲಿರುವುದರಿಂದ ಸಾಮಾನ್ಯ ಮತ್ತು ಇತರೇ ವರ್ಗದ ಮುಖಂಡರಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ಟಿಕೆಟ್ ಯಾರಾದರು ತನ್ನಿ ಚುನಾವಣೆ ಎದುರಿಸೋಣ ಎಂದು ಹೇಳಿದ್ದಾರೆ.

ನಾಗೇಂದ್ರ ಸಹೋದರನಿಗೆ ಅಲ್ಲದೆ ಇತರೇ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲದಲ್ಲಿ ಪಕ್ಷದ ಮುಖಂಡರಿದ್ದು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.

ಈಗ ಈ ಕುರಿತು ನಿರ್ಧಾರ ಸಚಿವ ಡಿ.ಕೆ.ಶಿವಕುಮಾರ್ ಅಂಗಳದಲ್ಲಿರುವುದರಿಂದ ಅವರು ಯಾವ ರೀತಿ ಇದನ್ನು ನಿಭಾಯಿಸಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಗೆಲ್ಲಿಸಿ ತರುತ್ತಾರೆಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರದ್ದಾಗಿದೆ.

ಇದು ಸಾಮಾನ್ಯ ಕ್ಷೇತ್ರವಾಗಿದ್ದರೆ, ಈ ವೇಳೆಗೆ ಪ್ರಬಲ ರಾಜಕೀಯ ಇಲ್ಲವೇ ಹಣಕಾಸು ಪ್ರಭಾವದ ವ್ಯಕ್ತಿ ದೆಹಲಿಯಿಂದ ಈ ವೇಳಿಗೆ ಟಿಕೆಟ್ ತಂದು ಬಿಡುತ್ತಿದ್ದರೇನೋ

Leave a Comment