ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕರೆ

ಹೊಸಪೇಟೆ.ಮಾ.12 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೇಟ್ ನೀಡಿದರೂ, ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸುವಂತೆ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತಾ ಕರೆ ನೀಡಿದರು.

ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ಜರುಗಿದ ಕಾಂಗ್ರೆಸ್ ನ ಎಲ್ಲಾ ವಿಭಾಗಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿದವರನ್ನು ಪಕ್ಷ ಎಂದೂ ಕೈಬಿಡುವುದಿಲ್ಲ. ವಿಜಯ ನಗರದ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಇನ್ನೂ ಕೆಲವೇ ದಿನಗಳಲ್ಲಿ ಚುನಾವಣೆಗಳು ಬರುವುದರಿಂದ ಎಲ್ಲಾರೂ ಒಟ್ಟಾಗಿ ಪಕ್ಷವನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಿ ಎಂದರು.

ಸಭೆಯಲ್ಲಿ ಎಸ್.ಸಿ. ಮಹಿಳಾ ಘಟಕದ ಸುಮಲತಾ, ಅನ್ವರ್ ಸಾಬ್, ಓಬಿಸಿ.ವಿಭಾಗದ ಶ್ರೀನಿವಾಸ್ ಹೊಸಳ್ಳಿ, ಹೆಚ್ ಎನ್.ಎಫ್ ಮೊಹಮ್ಮದ್ ಗೌಸ್ ನಿಯಾಜಿ, ಶ್ರೀಕಾಂತ್, ಸಾದಿಕ್ ಆಲಿ, ವಿಜಯ್ ಕುಮಾರ್, ಕೆ ಅಂಜನಿ, ಚಂದ್ರ ಶೇಖರ್, ನನ್ನಿಮಾ, ಲಕ್ಷ್ಮಿ, ಮಾರೆಕ್ಕಾ, ಉಮಾದೇವಿ, ಗಾಳೆಮ್ಮ, ಜಾಹೀದಾ, ಕಮಲಾ, ಶಾಂತಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

Leave a Comment