ಕಾಂಗ್ರೆಸ್ಸಿಗೆ ಅಧ್ಯಕ್ಷ ಸ್ಥಾನ

ಮಾನ್ವಿ ಎಪಿಎಂಸಿ ಚುನಾವಣೆ
ಮಾನ್ವಿ.ಜೂ.30- ಮಾನ್ವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬಿಜೆಪಿಗೆ ಸ್ಥಾನವಿದ್ದರೂ, ಅಧ್ಯಕ್ಷ ಸ್ಥಾನ ಗೆಲ್ಲಲು ಸಾಧ್ಯವಾಗದೇ, ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದರೇ, ಬಿಜೆಪಿ ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳ್ಳುವಂತಾಗಿದೆ.
ಒಟ್ಟು 15 ಸದಸ್ಯರ ಎಪಿಎಂಸಿಯಲ್ಲಿ ಬಿಜೆಪಿಗೆ 8 ಸದಸ್ಯರ ಬೆಂಬಲವಿತ್ತು. ಆದರೆ, ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ವೀರಾರೆಡ್ಡಿ ತಂದೆ ಆದೆಪ್ಪ ಬಾವಿಕಟ್ಟಿ ಅವರು 8 ಮತಗಳಿಂದ ಜಯಗಳಿಸಿದರೇ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮೌಲಾಸಾಬ್ ಸಬ್ಜಲಿ ಇವರು ಕೇವಲ 7 ಮತ ಪಡೆದು 1 ಮತ ಅಂತರದಿಂದ ಪರಾಭವಗೊಂಡಿದ್ದಾರೆ. ಆದರೆ, ಉಪಾಧ್ಯಕ್ಷ ಸ್ಥಾನದಲ್ಲಿ ಈ ಲೆಕ್ಕಚಾರ ತಲೆಕೆಳಗಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಾರ್ವತಮ್ಮ ಶರಣಪ್ಪ ಅವರು ಜಯಗಳಿಸಿದ್ದರೇ, ಕಾಂಗ್ರೆಸ್ಸಿನ ಹನುಮೇಶ ಮದ್ಲಾಪೂರು ಅವರು ಪರಾಭವಗೊಂಡಿದ್ದಾರೆ.
ಎಪಿಎಂಸಿಯಲ್ಲಿ ಬಿಜೆಪಿಗೆ ಬಹುಮತವಿದ್ದು, ಅಧಿಕಾರ ಕಳೆದುಕೊಂಡ ಅವಾಂತರಕ್ಕೆ ಯಾರು ಹೊಣೆ? ಎನ್ನುವುದೇ ಈಗ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Share

Leave a Comment