ಕಸಾಯಿಖಾನೆ ನಿರ್ಮಾಣ ಖಂಡಿಸಿ ಪ್ರತಿಭಟನೆ

ಮೈಸೂರು. ಅ.15- ನಗರದ ಹಳೆಕೆಸರೆ ಗ್ರಾಮದಲ್ಲಿರುವ ಕುದುರೆ ಮಾಳದ ಸ್ಥಳದಲ್ಲಿ ಕಸಾಯಿಖಾನೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ ನಗರದ ಹಳೆಕೆಸರೆ ಮುಖ್ಯ ರಸ್ತೆಯನ್ನು ತಡೆದು ಮುಖಂಡರಾದ ಜಯಕುಮಾರ್ ಅವರ ನೇತೃತ್ವದಲ್ಲಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸೇರಿದಂತೆ ಸುಮಾರು 200 ಜನರು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ವತಿಯಿಂದ ಹಳೆಕೆಸರೆ ಗ್ರಾಮದಲ್ಲಿರುವ ಕುದುರೆ ಮಾಳದ ಸ್ಥಳದಲ್ಲಿ ಕಸಾಯಿಖಾನೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವ ಕ್ರಮವನ್ನು ಖಂಡಿಸಿದರು. ಇಲ್ಲಿ ಕಸಾಯಿ ಖಾನೆಯನ್ನು ತೆರೆಯಬಾರದು. ಇದನ್ನು ನಾವು ವಿರೋಧಿಸುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದರಲ್ಲದೇ, ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

Leave a Comment