ಕಷ್ಟದಲ್ಲಿದ್ದಾಗ ದ್ಯುತಿಗೆ ಬೆಂಬಲ ನೀಡಿದ್ದ ಗೋಪಿ ಚಂದ್

 

ನವದೆಹಲಿ, ಆ.೨೭ ನಿನ್ನೆ ಜಕಾರ್ತ ಜಿಬಿಜೆ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಮಿಂಚಿದ ದ್ಯುತಿ ಚಾಂದ್ ಸಾಧನೆಗೆ ಅತೀ ಮೆಚ್ಚುಗೆ ಸೂಚಿಸಿರುವ ರಾಷ್ಟ್ರೀಯ
ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೇಲ ಗೋಪಿಚಂದ್, ” ಎದುರಾದ ಎಲ್ಲ ಸಂಕಷ್ಟಗಳಲ್ಲೂ ಎದೆ ಗುಂದದೆ ಧೈರ್ಯದಿಂದ ಮುನ್ನೆಡೆದು, ಮಹಿಳೆಯರ ೧೦೦
ಮೀಟರ್‍ಸ್ ಓಟದಲ್ಲಿ ಬೆಳ್ಳಿ ಗೆದ್ದ ದ್ಯುತಿ ಚಾಂದ್ ಎಲ್ಲಾ ಕ್ರೀಡಾ ಪಟುಗಳಿಗೆ ಮಾದರಿ ಹಾಗೂ ಸ್ಫೂರ್ತಿದಾಯಕ ” ಎಂದಿದ್ದಾರೆ.
ಕೂದಲೆಳೆ ಅಂತರದಲ್ಲಿ ಚಿನ್ನದಿಂದ ವಂಚಿತಳಾಗಿ ಬೇಳ್ಳಿಗೆ ತೃಪ್ತಿ ಪಟ್ಟುಕೊಂಡ ದ್ಯುತೀ ಚಾಂದ್ , ಯಾರಿಗೂ ಬೇಡವಾಗಿ ತೀವ್ರ ಸಂಕಷ್ಟದಲ್ಲಿದ್ದಾಗ, ಗೋಪಿಚಂದ್ ಅವರಿಗೆ ತಮ್ಮ ಹೈದರಾಬಾದ್ ಅಕಾಡೆಮಿಯಲ್ಲೇ ಆಶ್ರಯ ನೀಡಿ ಬೆನ್ನುತಟ್ಟಿ ಬೆಂಬಲಿಸಿದ್ದರು.

Leave a Comment