ಕಷ್ಟಗಳ ಮೆಲಕು ಹಾಕಿದ ಪಾಂಡ್ಯ

ಮುಂಬೈ, ‌‌ಡಿ. ೭- ಸಾಧನೆಗೆ ಬಡವ- ಬಲ್ಲದ ಎಂಬ ಭೇದವಿಲ್ಲ ಎಂಬುದು ಭಾರತ ತಂಡ‌ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಗೂ ಅನ್ವಯಿಸುತ್ತದೆ.
ಬಡತನದಲ್ಲಿ ಬೆಳೆದು ಅವರ ಎಡಬಿಡದ ಅಭ್ಯಾಸ ಮತ್ತು ಶ್ರಮದ ಫಲವಾಗಿ ಹಾರ್ದಿಕ್ ಪಾಂಡ್ಯ ಇಂದು ಕೋಟಿಗಳ ಸರದಾರ. ಆದರೆ 2015ರ ಹಿಂದೆ ಇವರಿಗೆ ರೂಪಾಯಿಗೂ ಕಷ್ಟ ಪಡುವ ಸ್ಥಿತಿ ಇತ್ತಂತೆ.
ಇದನ್ನು ಹೇಳಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರೇ, 2015ರ ಐಪಿಎಲ್ ಟೂರ್ನಿ ಆಡುವ ಮುನ್ನ ಜೀವನ ನಿರ್ವಹಣೆಯೇ ಕಷ್ಟಕರವಾಗಿತ್ತು. ಖರೀದಿಸಿದ ಕಾರಿನ ಸಾಲದ ಕಂತನ್ನು ಕಟ್ಟಲಾಗದೆ 2 ವರ್ಷ ಕಾರನ್ನೇ ಬಚ್ಚಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
2015ರಲ್ಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡ ಚಾಂಪಿಯನ್ ಆದಾಗ ತಮಗೆ ಬಂದ 50 ಲಕ್ಷ ರೂ.ಗಳಲ್ಲಿ ಕಾರಿನ ಸಾಲವನ್ನು ತೀರಿಸಿದರಂತೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಈಗ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ.

Leave a Comment