ಕವಿಗಳ ನುಡಿ ಕನ್ನಡ ಸಾಹಿತ್ಯದ ಕನ್ನಡಿ-ಮಂಜುಳ.ಸಿ.ಎಸ್

ಚಾಮರಾಜನಗರ, ಡಿ.5- ಕನ್ನಡ ನಾಡಿನ ಪರಂಪರೆಯನ್ನು ಐತಿಹಾಸಿಕ ಮಹತ್ವವನ್ನು ಸಂಸ್ಕೃತಿಯನ್ನು ಜಗತ್ತಿಗೆ ಬಿಂಬಿ ಸುವ ಕನ್ನಡಿಗಳು ಕನ್ನಡದ ಕವಿ ಗಳು ಎಂದು ಶಿಕ್ಷಕಿ ಮಂಜುಳ. ಸಿ.ಎಸ್ ತಿಳಿಸಿದರು. ಜಿಲ್ಲಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗ ದೊಂದಿಗೆ ನ.1 ರಿಂದ 30 ರವರೆಗೆ ಏರ್ಪಡಿಸಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಬಂಜಾರ್ ಇಂಡಿಯನ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಕವಿ ಪರಂಪರೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಕನ್ನಡ ನಾಡಿನ ಸೌಂದರ್ಯ, ಹಿತಕರ ವಾತಾ ವರಣ, ಶ್ರೀಮಂತಿಕೆ, ವೈಭವ ಸಂಸ್ಕೃತಿ ಸಾಹಿತ್ಯ ಜಗತ್ತಿನೆಲ್ಲೆಡೆ ಖ್ಯಾತಿಗಳಿಸಲು ನಮ್ಮ ಕವಿ ಪುಂಗವರೇ ಕಾರಣ. ಆದಿಕವಿ ಪಂಪದಿಂದ ಹಿಡಿದು ಇಂದಿನ ಚಂದ್ರಶೇಖರ ಕುಂಬಾರ ರವರೆಗೂ ಅಧ್ಯಯನ ಮಾಡಿ ದರೆ ಕನ್ನಡ ನಾಡಿಗೆ ಕವಿಗಳ ಕಾಣ್ಕೆ ಏನೆಂಬುದು ಅರಿ ವಾಗುತ್ತದೆ. ಕವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕನ್ನಡ ನಾಡನ್ನು ಸಂಪೂರ್ಣವಾಗಿ ಅರಿ ತವರು ಕವಿಗಳು ಮಾತ್ರ. ಕನ್ನಡ ನಾಡಿನ ಏಕೀಕರಣ ಸಮಯದಲ್ಲಿ ಕವಿ ಗಳು ನಿರ್ವಹಿಸಿದ ಪಾತ್ರವನ್ನು ನೋಡಿದರೆ ಕವಿಗಳ ಮಹತ್ವ ಏನೆಂಬುದು ಅರಿವಾಗದಿರದು. ಕನ್ನಡ ಕವಿಗಳ ಪರಂಪರೆ ಆಕಾಶದಂತೆ ಅನಂತವಾದದ್ದು, ವಿಶಾಲವಾದದ್ದು. ಬರವಣಿಗೆ ಎನ್ನುವುದು ಕವಿಯ ಅಂತ ರಾಳದ ನುಡಿ, ಯಾವ ಕವಿಗೆ ಉತ್ತಮ ಸಂಸ್ಕಾರ ಇರುತ್ತದೋ ಅಂಥ ಕವಿ ವಾಗರ್ಧಗಳ ಸಂಹಿತೆ ಮೀರಿ ತನ್ನ ಬುದ್ಧಿ ಭಾವದಲ್ಲಿ ತೆಕ್ಕೆಯಾದ ಗ್ರಹಿಕೆ ಗಳಿಗೆ ತಕ್ಕ ಆಕಾರವನ್ನು ಕೊಡ ಬಲ್ಲವನಾಗಿರುತ್ತಾನೆ. ಕನ್ನಡದ ಕವಿಗಳು ಇದರಲ್ಲಿ ನಿಪುಣರು.
ನಮ್ಮ ಬದುಕಿಗೆ ಉತ್ತರ ಸಂಸ್ಕಾರ, ತತ್ವಾದರ್ಶಗಳು ಮೂಡಿಬರಲು ಕವಿಗಳೇ ಮೂಲ ಪೂಜ್ಯನೀಯ ಗ್ರಂಥಗಳಾದ ಮಹಾಭಾರತ, ರಾಮಾಯಣ ಗಳಲ್ಲಿ ಸಾರಿರುವ ಸತ್ಯ ಮೇವ ಜಯತೇ, ಧರ್ಮೋ ರಕ್ಷತಿ ರಕ್ಷಿತಃ ಎಂಬ ವಾಕ್ಯಗಳೇ ನಮ್ಮ ಆದರ್ಶ ನೀಯ ಬದುಕಿಗೆ ಮಾರ್ಗದರ್ಶ ನವಾಗುತ್ತವೆ. ಮೌಲ್ಯಗಳಾದ ರೀತಿ, ಸ್ನೇಹ, ಸೌಹಾರ್ಧತೆ, ಸಂಬಂಧಗಳ ಮಾಧುರ್ಯತೆ, ತ್ಯಾಗದ ಅಮರತ್ವಗಳನ್ನು, ಬದುಕಿನ ರೀತಿ ನೀತಿಗಳನ್ನು ಕಟ್ಟಿ ಕೊಡುವುದು ಕವಿಗಳ ಕೃತಿಗಳು, ಅಂತಹ ಕೃತಿಗಳಲ್ಲಿ ರಾಮಾ ಯಣ ಮಹಾಭಾರತ, ಶ್ರೀರಾಮಾ ಯಣ ದರ್ಶನಂ, ವಡ್ಡಾರಾಧನೆ, ಮುಂತಾದ ಕೃತಿಗಳು ಬದುಕಿಗೆ ಸಾರ್ಥಕ ಹಾದಿಯನ್ನು ತೋರುತ್ತವೆ. ನಾಡು-ನುಡಿಯ ಅಭಿಮಾನವನ್ನು ಜಾಗೃತ ಗೊಳಿಸುವ, ಕರ್ನಾಟಕ ಏಕೀ ಕರಣ ಸಂದರ್ಭದ ಕವಿಗಳ ಕೃತಿ ಗಳು ಮೈನವಿ ರೇಳಿಸುವ ಸಾಲು ಗಳು ಇಂದಿಗೂ ಪರಭಾಷಾ ವ್ಯಾಮೋಹದಲ್ಲಿರುವ ನಮ್ಮ ಅಂಧಕಾರಕ್ಕೆ ಜ್ಯೋತಿಗಳಂತಿವೆ. ನಮ್ಮ ನಾಡಿನ ಚೆಲವು ದರ್ಶನ ವಾದದ್ದೇ ಕವಿಗಳಿಂದ. ನಮ್ಮ ಬದುಕಿಗೆ ಸರಿಯಾದ ದಾರಿಸಿ ಗುವುದು ಕವಿಗಳಿಂದ. ಕವಿ ಇಲ್ಲದ ಬದುಕು ಶೂನ್ಯಮಯ ವಾಗುತ್ತದೆ. ಅದರಲ್ಲಿಯೂ ಕನ್ನಡದ ಕವಿಗಳ ಪರಂಪರೆಯೇ ಅದ್ಭುತ ಅಮೋಘ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಪ್ರಭುಸ್ವಾಮಿ ಮಾತನಾಡಿ ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ವಿದೆ. ಕನ್ನಡ ಕವಿಗಳ ಬರವಣಿ ಗೆಯೇ ಮಹಾಸಂಪತ್ತು. ನಿಜ ವಾದ ಅರ್ಧದಲ್ಲಿ ಅವರು ಬರವಣಿಗೆಗಾಗಿಯೇ ಹುಟ್ಟಿದರು ಎಂದರೆ ತಪ್ಪಾಗಲಾರದು ಎಂದರು. ನಿವೃತ್ತ ಎ.ಎಸ್.ಐ ಚಾ.ಶ್ರೀ.ಜಗದೀಶ್ ವಿದ್ಯಾರ್ಥಿ ಗಳಿಗೆ ಕವಿಗಳ ರಚನೆಯ ಗೀತೆ ಗಳನ್ನು ಹೇಳಿಕೊಟ್ಟರು. ಸ್ವರಚಿತ ಪೊಲೀಸ್ ಟ್ರಾಫಿಕ್ ಗೀತೆ ಗಳನ್ನು ಮಕ್ಕಳಿಂದ ಹಾಡಿಸಿದರು. ಶಿಕ್ಷಕ ಜೆ.ಬಿ.ಮಹೇಶ್ ನಿರೂಪಿಸಿ ದರು. ಬಂಜಾರ ಶಾಲೆ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕ ವರ್ಗ ದವರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Comment