ಕಳ್ಳನ ಬಂಧನ 17 ದ್ವಿಕಚಕ್ರವಾಹನ ವಶ

ಬಳ್ಳಾರಿ, ಡಿ.7: ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು. ಆಥನಿಂದ ಅಂದಾಜು ರೂ.6.48 ಲಕ್ಷ ಮೌಲ್ಯದ ಹದಿನೇಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಹುಸೇನ್ ಅಹಮ್ಮದ್ (19) ಕೌಲ್ ಬಜಾರ್ ನಿವಾಸಿ 9 ಮೋಟಾರ್ ಸೈಕಲ್ ಹಾಗೂ ಎಂಟು ಸ್ಕೂಟರ್ ಸೇರಿ 17 ದ್ವಿಚಕ್ರ ವಾಹನಗಳನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ.

ಪೊಲೀಸರು ನಗರದ ಟಿ.ಬಿ.ಸ್ಯಾನಿಟೋರಿಯಂ ಬಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ. ಕೌಲ್ ಬಜಾರ್, ಬ್ರೂಸ್ ಪೇಟೆ ಪೊಲೀಸ್ ಠಾಣೆ ಹಾಗೂ ಇತರೆ ಕಡೆಗಳಲ್ಲಿ ನಕಲಿ ಬೀಗಗಳನ್ನು ಉಪಯೋಗಿಸಿ ಕಳ್ಳತನ ಮಾಡಿ ತಲೆಮರೆಸಿಕೊಂಡಿರುವ ಆರೋಪಿ ಜಾವೀದನೊಂದಿಗೆ ಸೇರಿ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಗಳನ್ನು ಕಳವು ಮಾಡಿಕೊಂಡಿರುವುದಾಗಿ ಈ ಆರೋಪಿ ಒಪ್ಪಿಕೊಂಡಿದ್ದಾನೆ.

Leave a Comment