ಕಳಪೆ ಮಾಸ್ಕ್,ಸ್ಯಾನಿಟೈಸರ್ ಮಾರಾಟ ಮಾಡಿದ್ರೆ ಜೈಲಿಗೆ:ನಕುಲ್

ಬಳ್ಳಾರಿ,ಮಾ.26: ಕೋವಿಡ್-19 ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ತ್ರಿಪಲ್ ಲೇಯೆರ್ ಮಾಸ್ಕ್‍ಗಳನ್ನು 10 ರೂ ಗೆ ಹಾಗೂ 200 ಮೀ.ಲಿ ಸ್ಯಾನಿಟೈಸರ್‍ಗೆ 100ರೂ.ಗಳಂತೆ ತೆಗೆದುಕೊಳ್ಳಬೇಕು. ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟಮಾಡುವುದು ಕಂಡುಬಂದರೆ ಅಂತಹವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಎಚ್ಚರಿಕೆ ನೀಡಿದ್ದಾರೆ..

ಉತ್ತಮ ಗುಣಮಟ್ಟದ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಜಿಲ್ಲೆಗೆ ಪೂರೈಸುವ ನಿಟ್ಟಿನಲ್ಲಿ ವಿತರಕರು ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅವರಿಗೆ ಸೂಚನೆ ನೀಡಿದರು.

ಮಾಸ್ಕ್‍ಗಳನ್ನು melt blown non-woven fabric ಮೂಲಕ ತಯಾರಿಸಿದವುಗಳನ್ನು ಮಾತ್ರ ಜನರಿಗೆ ನೀಡಬೇಕು ಎಂದು ತಿಳಿಸಿದ ಡಿಸಿ ನಕುಲ್ ಅವರು ಜಿಲ್ಲೆಗೆ ಎಷ್ಟು ಅಗತ್ಯವೋ ಅಂತವುಗಳನ್ನು ಎಲ್ಲಿ ಗುಣಮಟ್ಟದಿಂದ ಕೂಡಿರುತ್ತವೆಯೋ ಎಂಬುದನ್ನು ಅರಿತು ಅಲ್ಲಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ತರಿಸಿಕೊಳ್ಳಿ ಅವುಗಳನ್ನು ಶೇಖರಿಸಿಟ್ಟುಕೊಳ್ಳಿ ಎಂದು ತಿಳಿಸಿದರು.

Leave a Comment