ಕಳಪೆ ಬಿತ್ತನೆ ಬೀಜ ವಿತರಣೆ ತಪ್ಪಿಸಿ: ಇಂಗಿನ

 

ಕಲಬುರಗಿ ಜೂ 20: ಕೃಷಿ ಇಲಾಖೆಯು ರೈತರಿಗೆ ವಿತರಿಸುವ ಬಿತ್ತನೆ ಬೀಜವನ್ನು ರಾಜ್ಯ ಬೀಜ ನಿಗಮದವರು ಪರೀಕ್ಷಿಸಿ ಯೋಗ್ಯ ಬಿತ್ತನೆ ಬೀಜಗಳನ್ನುಮಾತ್ರ ರೈತರಿಗೆ ವಿತರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ ಇಂಗಿನ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಖಾಸಗಿ ಕಂಪನಿಗಳಿಂದ ತಯಾರಿಸಲಾದ ಬೀಜಗಳು ಬಹುತೇಕ ಕಳಪೆ ಗುಣಮಟ್ಟದವು ಎಂದು ರೈತರಿಂದ ದೂರುಗಳು ಬರುತ್ತಿವೆ, ಇದನ್ನು ತಪ್ಪಿಸಲು ರಾಜ್ಯ ಬೀಜ ನಿಗಮವು  ಖಾಸಗಿ ಕಂಪನಿ ಉತ್ಪಾದಿಸಿದ ಬೀಜಗಳನ್ನು ಪರೀಕ್ಷಿಸಿಪ್ರಮಾಣಿಕರಿಸಿ ರೈತರಿಗೆ ಒದಗಿಸಲು ಮುಂದಾಗಬೇಕು ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಇದೇ ಮಾದರಿಯ ಪದ್ಧತಿ ಜಾರಿಯಲ್ಲಿದೆ ಎಂದರು

2017 ..18 ಸಾಲಿನ ಕೇಂದ್ರದ 7 ಕೋಟಿ ರೂ ಪ್ರೋತ್ಸಾಹಧನ ಈಗಾಗಲೇ

ಬಿಡುಗಡೆಯಾಗಿದ್ದು ಅದನ್ನು ಬೀಜೋತ್ಪಾದಕರಿಗೆ ವಿತರಿಸಬೇಕು.2018..19 ಸಾಲಿನಲ್ಲಿ ಬೆಳೆದ ಬೀಜಗಳಿಗೆ ಸರ್ಕಾರ ನಿಗದಿ ಮಾಡಿದ ಎಂ ಎಸ್ ಪಿ ದರಕ್ಕೆ ಶೇ 25 ಹೆಚ್ಚಿನ ದರ ಸೇರಿಸಿ ನೀಡಬೇಕು. ಎಂದು ಆಗ್ರಹಿಸಿದರು.

ಈ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ( ಜೂನ್ 21 ) ಮತ್ತು ಜೂನ್ 22 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವದು ಎಂದರು ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಹರಸೂರ, ರಾಜೇಂದ್ರಕರೇಕಲ್

ಎಂ ಎಸ್ ಪಾಟೀಲ ನರಿಬೋಳ ಸೇರಿದಂತೆ ಹಲವರಿದ್ದರು..

Leave a Comment